ಅಸೋಚಾಮ್ ಸಾಮಾಜಿಕ ಬ್ಯಾಂಕಿಂಗ್ ಎಕ್ಸಲೆನ್ಸ್ ಪ್ರಶಸ್ತಿ ಜಯಿಸಿದ ಕಾರ್ಪೊರೇಶನ್ ಬ್ಯಾಂಕ್

Update: 2018-02-18 17:42 GMT

ಹೊಸದಿಲ್ಲಿ, ಫೆ.18: ಆಸೋಚಾಮ್‌ನಿಂದ ನೀಡಲ್ಪಡುವ ಅತ್ಯುತ್ತಮ ಸಾಮಾಜಿಕ ಬ್ಯಾಂಕ್ ಪ್ರಶಸ್ತಿಯನ್ನು ಕಾರ್ಪೊರೇಶನ್ ಬ್ಯಾಂಕ್ ತನ್ನದಾಗಿಸಿಕೊಂಡಿದೆ. ಜೊತೆಗೆ ಬೃಹತ್ ಬ್ಯಾಂಕ್ ವರ್ಗದಲ್ಲಿ 2017ರ ಪ್ರಯೋರಿಟಿ ಸೆಕ್ಟರ್ ಲೆಂಡಿಂಗ್ ಜಂಟಿ ರನ್ನರ್ ಅಪ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಮುಂಬೈಯಲ್ಲಿ ಫೆಬ್ರವರಿ 17ರಂದು ನಡೆದ 13ನೇ ವಾರ್ಷಿಕ ಬ್ಯಾಂಕಿಂಗ್ ಸಮ್ಮೇಳನ ಮತ್ತು ಸಾಮಾಜಿಕ ಬ್ಯಾಂಕಿಂಗ್ ಎಕ್ಸಲೆನ್ಸ್ ಪ್ರಶಸ್ತಿ-2017 ಸಮಾರಂಭದಲ್ಲಿ ಕಾರ್ಪೊರೇಶನ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾದ ಚಂದ್ರಕಾಂತ್ ನಾಯಕ್ ಯು. ಅವರು ಕೇಂದ್ರ ವಿತ್ತ ರಾಜ್ಯ ಸಚಿವರಾದ ಶಿವ ಪ್ರತಾಪ್ ಶುಕ್ಲಾ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ರಶಸ್ತಿಗೆ ಆಯ್ಕೆಯನ್ನು ಮೂಲಭೂತವಾಗಿ ಪ್ರಬಲ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಸಾಮಾಜಿಕ ಬ್ಯಾಂಕನ್ನು ರಚಿಸುವಲ್ಲಿ ಬ್ಯಾಂಕ್‌ಗಳ ನಿರ್ವಹಣೆಯ ಆಧಾರದಲ್ಲಿ ಮಾಡಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ಒಳಗೊಳ್ಳುವಿಕೆಯ ಬೆಳವಣಿಗೆಯ ಪ್ರಾಮುಖ್ಯತೆಯನ್ನು ಅರಿತಿರುವ ಕಾರ್ಪೊರೇಶನ್ ಬ್ಯಾಂಕ್ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಬ್ಯಾಂಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 17ರಂದು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಅಸೋಚಾಮ್‌ನ ಅತ್ಯುತ್ತಮ ಸಾಮಾಜಿಕ ಬ್ಯಾಂಕ್ ಮತ್ತು ಬೃಹತ್ ಬ್ಯಾಂಕ್ ವರ್ಗದಲ್ಲಿ 2017ರ ಪ್ರಯೋರಿಟಿ ಸೆಕ್ಟರ್ ಲೆಂಡಿಂಗ್ ಜಂಟಿ ರನ್ನರ್ ಅಪ್ ಪ್ರಶಸ್ತಿಯನ್ನು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾದ ಚಂದ್ರಕಾಂತ್ ನಾಯಕ್ ಯು. ಅವರು ಕೇಂದ್ರ ವಿತ್ತ ರಾಜ್ಯ ಸಚಿವರಾದ ಶಿವ ಪ್ರತಾಪ್ ಶುಕ್ಲಾ ಅವರಿಂದ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News