ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ

Update: 2018-02-19 11:24 GMT

ಮಂಗಳೂರು, ಫೆ.19: ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ನೇತೃತ್ವದ 51ನೇ ಉಚಿತ ವೈದ್ಯಕೀಯ ಶಿಬಿರವು ತೋಕೂರು ಫೇಮಸ್ ಯೂತ್ ಕ್ಲಬ್, ಪೂಜಾ ಫ್ರೆಂಡ್ಸ್ ಹಳೆಯಂಗಡಿ ಮತ್ತು ಎಜೆ ಆಸ್ಪತ್ರೆ ಹಾಗೂ ವೈದ್ಯಕೀಯ ಮಹಾದ್ಯಾಲಯ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆಯಿತು.

 ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುರಾಜ್ ಎಸ್. ಪೂಜಾರಿ, ವೈದ್ಯಕೀಯ ಶಿಬಿರದ ಪ್ರಧಾನ ಸಂಚಾಲಕ ಜೆ. ನಾಂಗೇಂದ್ರ ಕುಮಾರ್ ಜಪ್ಪಿನಮೊಗರು, ಲಯನ್ ಜೆ. ಶಶಿಕಾಂತ್ ಶೆಟ್ಟಿ ತಂದೊಳಿಗೆ, ಲನ್ಸ್ ಕ್ಲಬ್ ತುಳುನಾಡು ಅಧ್ಯಕ್ಷ ಗಣೇಶ್ ಸಾಲ್ಯಾನ್, ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಸುಧೀರ್ ಭಂಡಾರಿ, ಪೂಜಾ ಫ್ರೆಂಡ್ಸ್‌ನ ಅಧ್ಯಕ್ಷ ಮಿಥುನ್ ಸುವರ್ಣ,ಕೆ. ಭುವಾನಾಭಿರಾಮ ಉಡುಪ, ಬಿಲ್ಲವ ಸಂಘ ಹಳೆಯಂಗಡಿ ಇದರ ಅಧ್ಯಕ್ಷ ಚಂದ್ರಶೇಖರ ನಾನಿಲ್, ಗೌರವಾಧ್ಯಕ್ಷ ಗಣೇಶ್ ಬಂಗೇರ, ನೆಹರೂ ಕೇಂದ್ರದ ಅಧಿಕಾರಿ ಹಫ್ಸಾ, ಕಾಂಗ್ರೆಸ್ ಯುವ ಇಂಟೆಕ್ ಅಧ್ಯಕ್ಷ ಪುನೀತ್ ಶೆಟ್ಟಿ, ಮಹೇಶ್ ಕೋಡಿಕಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News