ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರ ಗಮನ ಅಗತ್ಯ : ಇಸ್ಮಾಯಿಲ್ ಸಅದಿ

Update: 2018-02-19 11:36 GMT

ಮುಡಿಪು,ಫೆ.19: ಧರ್ಮ ಮತ್ತು ಸಂಸ್ಕೃತಿ ಇವು ಮಾನವ ಜೀವನದಲ್ಲಿ ಅಳವಡಿಸಬೇಕಾದ ಮುಖ್ಯವಾದ ಅಂಶಗಳಾಗಿವೆ. ಮದ್ರಸ ಇರುವುದು ಧಾರ್ಮಿಕ ವಿದ್ಯಾಭ್ಯಾಸವನ್ನು ಅಭ್ಯಾಸ ಮಾಡಲಿಕ್ಕಾಗಿ ಆಗಿದೆ. ಧಾರ್ಮಿಕ ಮತ್ತು ಲೌಕಿಕ ವಿಚಾರಗಳನ್ನು ಅರ್ಥಮಾಡಿಕೊಂಡಲ್ಲಿ ಮಾತ್ರ ಸಮಾಜದಲ್ಲಿ ಐಕ್ಯತೆಯಿಂದ ಜೀವಿಸಲು ಸಾಧ್ಯ. ಧರ್ಮ, ಸಂಪ್ರದಾಯ ಇಲ್ಲದವನ ಬದುಕು ಉತ್ತಮ ಬದುಕು ಆಗಲು ಸಾಧ್ಯವಿಲ್ಲ ಎಂದು ಎಸ್‍ಜೆಎಂ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮಣೆ ಹೇಳಿದರು. 

ಅವರು ಕಿನ್ಯ ಬುಖಾರಿ ಜುಮಾ ಮಸೀದಿ ಮತ್ತು ನೂರುಲ್ ಉಲಮಾ ಮದ್ರಸ ಇದರ ಆಶ್ರಯದಲ್ಲಿ ಕಿನ್ಯ ಬದ್ರಿಯಾ ನಗರ ಬುಖಾರಿ ಮಸೀದಿಯಲ್ಲಿ ನಡೆದ ಮದ್ರಸ ಸಮ್ಮೇಳನದಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು. 

ಮದ್ರಸಕ್ಕೆ ಬರುವ ಮಕ್ಕಳ ಶಿಕ್ಷಣ ಯಾವ ಮಟ್ಟದಲ್ಲಿ ಸಾಗುತ್ತಿದೆ ಎನ್ನುವುದನ್ನು ನೋಡುವ ಕರ್ತವ್ಯ ಪೋಷಕರದ್ದಾಗಿದೆ. ಪೋಷಕರು ಆ ಕೆಲಸ ಮಾಡಿದರೆ  ಮಕ್ಕಳು ಶಿಕ್ಷಣದಲ್ಲಿ ದಾರಿ ತಪ್ಪಿ ಹೋಗಲು ಸಾಧ್ಯವಿಲ್ಲ ಎಂದರು. 

ಕಾರ್ಯಕ್ರಮದ ಪ್ರಯುಕ್ತ  ನೂರುಲ್ ಉಲಮಾ ಮದ್ರಸ ವಿದ್ಯಾರ್ಥಿಗಳಿಂದ ಸೈಕಲ್ ರ್ಯಾಲಿ ನಡೆಯಿತು.   ಹಸೈನಾರ್ ಬದ್ರಿಯಾನಗರ ರ್ಯಾಲಿಯ ನೇತೃತ್ವ ವಹಿಸಿದ್ದರು.  ಸಯ್ಯದ್ ಆಲವಿ ತಂಙಳ್ ದುವಾ ನೆರವೇರಿಸಿದರು.  ಅಬ್ಬಾಸ್ ನಾಟೆಕಲ್ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.  ಮುಹಮ್ಮದ್ ಶರೀಫ್ ಬಾಖವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹ್‍ಬೂಬ್ ಸಖಾಫಿ ಕಿನ್ಯ, ಮೂಸಾ ಬದ್ರಿಯಾನಗರ, ಜಿ.ಜಿ. ಅಬ್ದುಲ್ ಅಝೀಝ್ ಮೊದಲಾದವರು ಉಪಸ್ಥಿತರಿದ್ದರು. ಶೌಕತ್  ಅಲಿ ಸಖಾಫಿ  ಅತಿಥಿಗಳನ್ನು ಸ್ವಾಗತಿಸಿದರು. ಫಯಾಝ್ ಧನ್ಯವಾದ ಸಮರ್ಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News