ಕಾಂಜಿಲಕೊಡಿ: ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ

Update: 2018-02-19 18:51 GMT

ಕಾಂಜಿಲಕೊಡಿ,ಫೆ.19: ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ ಅಂಗ ಸಂಸ್ಥೆ ಎಸ್ಕೆಎಸ್ಸೆಸ್ಸೆಫ್ ತನ್ನ 28ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 29 ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನವನ್ನು ಧ್ವಜರೋಹಣದ ಮೂಲಕ ಆಚರಿಸಲಾಯಿತು.

ಕಾಂಜಿಲಕೊಡಿ ಶಾಖೆಯ ಸಲಹೆಗಾರ ಹಾಗು ಜಮಾಅತ್ ಅಧ್ಯಕ್ಷರಾದ ಅಹ್ಮದ್ ಬಾವ ಕಾಂಜಿಲಕೊಡಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬದ್ರುಲ್ ಹುದಾ ಮಸೀದಿ ಖತೀಬ್ ಖಲೀಲ್ ದಾರಿಮಿ ಮಾತನಾಡಿ, ಯುವ ಜನತೆ ಎಸ್ಕೆಎಸ್ಸೆಸ್ಸೆಫ್ ನಂತಹ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಎಂ.ಹೆಚ್ ಹಾಜಿ ಅಡ್ಡೂರು, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ M.A ಮೊಹಮ್ಮದ್ ಕುಂಞಿ ಮಾಸ್ಟರ್, ಹಸನಬ್ಬ, ಸಮೀರ್ ನೂಯಿ, ಜೊತೆ ಕಾರ್ಯದರ್ಶಿ ನೌಫಲ್ ಕೊಡಿಬೆಟ್ಟು, ಕೋಶಾದಿಕಾರಿ ಮೊಹಮ್ಮದ್ ಶೆರೀಫ್ ಪೊನ್ನೆಲ,ಅಬ್ದುಲ್ ಅಝೀಝ್ ಪೊನ್ನೆಲ, ಟ್ರೆಂಡ್ ಅಬ್ದುಲ್ ರಶೀದ್ ಪೊನ್ನೆಲ, ಸರ್ಗಾಲಯಂ ಶಾಫಿ ಕಳಸಗುರಿ, ಮುಹಿದ್ದೀನ್ ಸಹದಿ ಉಸ್ತಾದ್, ಸಿದ್ದಿಕ್ ದಾರಿಮಿ ಅಸೈಗೊಳಿ, ಅಬ್ದುಲ್ ಜಬ್ಬಾರ್ ಪನೊಲಿಪಾದೆ ಹಾಗೂ ಇತರ ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಶಾಖಾ ಅಧ್ಯಕ್ಷ ಹಾರಿಸ್ ಕಳಸಗುರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News