ಭಟ್ಕಳ: ಶಿರಾಲಿಯ ಸಂಧ್ಯಾ ಗಣಪತಿ ಭಟ್ ರಿಗೆ ಡಾಕ್ಟರೇಟ್

Update: 2018-02-20 14:25 GMT

ಭಟ್ಕಳ, ಫೆ. 20: ಶಿರಾಲಿಯ ಸಂಧ್ಯಾ ಗಣಪತಿ ಭಟ್ 'ಹಣ್ಣು ವಿಜ್ಞಾನ' ದಲ್ಲಿ ಡಾ. ಆರ್. ಎಲ್. ಲಾಲ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ "ರೆಸ್ಪೋನ್ಸ್ ಆಫ್ ಆರ್ಗಾನಿಕ್ ಫೋರ್ಮುಲೇಶನ್ಸ್ ಆನ್ ಯೀಲ್ಡ್ ಎಂಡ್ ಕ್ವಾಲಿಟಿ ಆಫ್ ಲಿಚಿ ಕಲ್ಟಿವರ್ ರೋಸ್‌ಸೆಂಟೆಡ್" ಎನ್ನುವ ಪ್ರಬಂಧಕ್ಕೆ ಗೋವಿಂದ ವಲ್ಲಭ ಪಂತ್ ಯುನಿರ್ವಸಿಟಿ ಉತ್ತರಖಂಡ ಡಾಕ್ಟರೇಟ್ ಪ್ರದಾನ ಮಾಡಿದೆ.

ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮಳಾಗಿದ್ದ ಈಕೆ, ಬಿ.ಎಸ್.ಸಿ. ತೋಟಗಾರಿಕೆಯಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ್ದಳು. ಜ್ಯೂನಿಯರ್ ರಿಸರ್ಚ ಫೆಲೋಶಿಪ್‌ ನಲ್ಲಿ ಉನ್ನತ ರ್ಯಾಂಕ್ ಗಳಿಸಿದ್ದ ಅವರು ಸೀನಿಯರ್ ರಿಸರ್ಚ ಫೆಲೋಶಿಫ್‌ನಲ್ಲಿಯೂ ಕೂಡಾ ರ್ಯಾಂಕ್ ಗಳಿಸಿ ಪಿ.ಎಚ್.ಡಿ. ಪದವಿಯನ್ನು ಗಳಿಸಿರುವುದು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯಾಗಿದೆ. ಎಂ.ಎಸ್ಸಿ. ಓದುತ್ತಿರುವಾಗ ಮಧ್ಯಪ್ರದೇಶದಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಎಗ್ರಿ ಯುನಿಫೆಸ್ಟ್‌ನಲ್ಲಿ ಲೈಟ್ ಓಕಲ್ ಸ್ಪರ್ಧೆಯಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದು, ಪ್ರಸ್ತುತ ಭಟ್ಕಳ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಧ್ಯಾ ಗಣಪತಿ ಭಟ್ ಶಿರಾಲಿಯ ಜಿ.ಎಲ್. ಭಟ್ಟ ಹಾಗೂ ಶಿಕ್ಷಕಿ ಮೂಕಾಂಬಿಕಾ ಅವರ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News