​ವಕ್ಫ್ ಸಂಸ್ಥೆಗಳಿಗೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಸೂಚನೆ

Update: 2018-02-20 16:43 GMT

ಮಂಗಳೂರು, ಫೆ. 20: ರಾಜ್ಯ ಪ್ರಾಥಮಿಕ ಪ್ರೌಢ ಶಿಕ್ಷಣ ಮತ್ತು ವಕ್ಫ್ ಸಚಿವರ ನಿರ್ದೇಶನದ ಪ್ರಕಾರ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ಸುತ್ತೋಲೆಯ ಪ್ರಕಾರ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ.ಯು.ಕೆ.ಕಣಚೂರು ಮೋನು ಕೆಲವು ಸೂಚನೆಗಳನ್ನು ನೀಡಿದ್ದಾರೆ.

ವಕ್ಫ್ ಸಂಸ್ಥೆಯ ಹೆಸರು , ವಿಳಾಸ, ಸಂಸ್ಥೆಯ ವಿಧ (ಮಸೀದಿ, ಮದರಸ, ಖಬರಸ್ಥಾನ, ಇತ್ಯಾದಿ) ಸ್ಥಾಪಿತವಾದ ವರ್ಷ ಮುಂತಾದ ಶಾಶ್ವತ ವಿವರಗಳನ್ನು ಗ್ರಾನೈಟ್ ಶಿಲೆಯ ಮೇಲೆ ಕೊರೆಯಿಸಿ ಸಂಸ್ಥೆಯ ಮುಂಭಾಗದಲ್ಲಿ ಅಳವಡಿಸ ಬೇಕು.

ವಕ್ಫ್ ಸಂಸ್ಥೆಯ ಮುತವಲ್ಲಿಯ ಹೆಸರು, ಕಾರ್ಯನಿರ್ವಹಣೆಯ ಅವಧಿ, ಆಡಳಿತ ಮಂಡಳಿ ಸದಸ್ಯರ ವಿವರಗಳನ್ನು ವಕ್ಫ್ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಮತ್ತು ಕಾಲ ಕಾಲಕ್ಕೆ ನವೀಕರಿಸುವುದು.

ವಕ್ಫ್ ಸಂಸ್ಥೆಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಮಂಜೂರಾದ ಅನುದಾನ , ಸಾರ್ವಜನಿಕರ ದೇಣಿಗೆ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ನೀಡಲಾದ ದೇಣಿಗೆ, ಸಹಾಧನದ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸುವುದು .

ವಕ್ಫ್ ಸಂಸ್ಥೆಗೆ ಮಂಜೂರಾದ ಅನುದಾನ, ದೇಣಿಗೆಗಳನ್ನು ವಕ್ಫ್ ಸಂಸ್ಥೆಯ ಅಭಿವೃದ್ಧಿ , ಸಂರಕ್ಷಣೆಗ ಉಪಯೋಗಿಸಿಕೊಂಡಿರುವ ಬಗ್ಗೆ ಬಳಕೆ ಪ್ರಮಾಣ ಪತ್ರ, ಆದಾಯ ಖರ್ಚಿನ ವಿವರವನ್ನು ಲೆಕ್ಕಪರಿಶೋಧಕರಿಂದ ದೃಢೀಕರಿಸಿ ಸಂಪೂರ್ಣ ವಿವರಗಳನ್ನು ರಾಜ್ಯ ವಕ್ಫ್ ಮಂಡಳಿಗೆ ಕಡ್ಡಾಯವಾಗಿ ಸಲ್ಲಿಸುವುದು ಹಾಗೂ ಅದರ ಪ್ರತಿಗಳನ್ನು ಸಂಸ್ಥೆಯ ದಾಖಲೆಗಳಲ್ಲಿ ಸಂರಕ್ಷಿಸುವುದು.

ಬಿಡುಗಡೆಯಾದ ಅನುದಾನವನ್ನು ವಕ್ಫ್ ಆಸ್ತಿಗಳ ಸಂರಕ್ಷಣೆ ಅಭಿವೃದ್ಧಿಗಾಗಿ ಉಪ ಯೋಗಿಸಿರುವ ಬಳಕೆ ಪ್ರಮಾಣ ಪತ್ರಗಳನ್ನು ಹಾಗೂ ಅದರ ಕಾಮಗಾರಿ ಪೂರ್ಣಗೊಳಿಸಿರುವ ಬಗ್ಗೆ ಛಾಯಾಚಿತ್ರವನ್ನು ಜಿಲ್ಲಾವಾರು ಪಡೆದು ಸಲ್ಲಿಸುವಂತೆ ಸೂಚಿಸಿರುತ್ತಾರೆ ಎಂದು ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News