ಮಣಿಪಾಲ: ಮನೆಗೆ ನುಗ್ಗಿ ಕಳ್ಳತನ

Update: 2018-02-20 17:38 GMT

ಮಣಿಪಾಲ, ಫೆ.20: ಇಂದು ಬೆಳಗ್ಗೆ 11ರಿಂದ 12 ಗಂಟೆಯ ನಡುವಿನ ಅವಧಿಯಲ್ಲಿ ಕೆಎಂಸಿ ಕ್ವಾಟ್ರಸ್‌ನಲ್ಲಿರುವ ಅಶೋಕ್ ಎಂಬವರ  ಮನೆಗೆ ನುಗ್ಗಿ ನಾಲ್ಕು ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ವಾಟ್ರಸ್‌ನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗೆ ಗಾದ್ರೆಜ್‌ನ ಲಾಕರ್ ಮುರಿದು ಅದರಲ್ಲಿಟ್ಟಿದ್ದ 160ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ, ಇದರ ಮೌಲ್ಯ ನಾಲ್ಕು ಲಕ್ಷ ರೂ.ಗಳೆಂದು ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ಲೀನಾ ಅಶೋಕ್ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News