ಉಡುಪಿ: ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ

Update: 2018-02-20 17:41 GMT

ಉಡುಪಿ, ಫೆ.20: ಸಾಮಾಜಿಕವಾಗಿ ಹಕ್ಕುಗಳಿಗೆ ಧಕ್ಕೆ ಆದಾಗ ಜಾತಿ, ಮತ ಎನ್ನದೇ ಸಮಾನ ನ್ಯಾಯ ಒದಗಿಸುವ ಮಹತ್ತರ ಕೆಲಸವನ್ನು ನ್ಯಾಯಾಲಯ ಗಳು ನಿರ್ವಹಿಸುತ್ತಿವೆ ಎಂದು ನ್ಯಾಯಾಧೀಶ ವಿವೇಾನಂದ ಪಂಡಿತ್ ಹೇಳಿದ್ದಾರೆ.

ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ, ವಕೀಲರ ಸಂಘ, ಉಡುಪಿ, ಪೊಲೀಸ್ ಇಲಾಖೆ ಮತ್ತು ವೈಕುಂಠ ಬಾಳಿಗಾ ಕಾನೂನು ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ವೈಕುಂಠ ಬಾಳಿಗಾ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ-2018ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನ್ಯಾಯಾಲಯಗಳು ನ್ಯಾಯಪರವಾಗಿದ್ದು, ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಚ್ಯುತಿ ಬಂದರೆ, ಸಾಮಾಜಿಕ ನ್ಯಾಯ ಪಡೆಯುವ ಉದ್ದೇಶವೇ ವಿಶ್ವ ಸಾಮಾಜಿಕ ನ್ಯಾಯ ಎಂದವರು ಹೇಳಿದರು.

ವಿಶ್ವ ಸಾಮಾಜಿಕ ನ್ಯಾಯವು ವಿಶ್ವಕ್ಕೆ ಒಂದೇ ನ್ಯಾಯ ದೊರಕಬೇಕೆಂಬ ಮುಖ್ಯ ಧ್ಯೇಯವನ್ನು ಹೊಂದಿದ್ದು, ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಶೋಷಣೆಗೆ ಒಳಗಾದವರು ಈ ಸಾಮಾಜಿಕ ನ್ಯಾಯದಡಿಯಲ್ಲಿ ಸಮಾನ ನ್ಯಾಯ ಪಡೆಯಬಹುದಾಗಿದೆ. ವ್ಯವಸ್ಥೆಯಲ್ಲಿ ಸುವ್ಯವಸ್ಥಿತ ಬದುಕು ನಡೆಸಲು ಸಾಮಾಜಿಕ ನ್ಯಾಯ ಬಹುಮುಖ್ಯ ಎಂದು ವಕೀಲರ ಸಂಘದ ಅಧ್ಯಕ್ಷ ಹೆಚ್.ರತ್ನಾಕರ ಶೆಟ್ಟಿ ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ, ಸಿಸಿಲಾ ಡಿಸೋಜಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಡ್ಯಾರೀಲ್ ಸ್ವಾಗತಿಸಿ, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News