ಅಬಕಾರಿ ಇಲಾಖೆ ದಾಳಿ: 11 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ

Update: 2018-02-20 17:44 GMT

ಮಂಗಳೂರು, ಫೆ. 20: ಅಕ್ರಮವಾಗಿ ಮದ್ಯಸಾರ ಸಂಗ್ರಹಿಸಿ ಇಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ, ಸುಮಾರು 7,805 ಲೀಟರ್ ಮದ್ಯ ಹಾಗೂ 2 ವಾಹನಗಳನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ  11ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಜೋಸ್ ಸೆಬೆಸ್ಟಿನ್ ಎಂಬಾತನನ್ನು ಬಂಧಿಸಲಾಗಿದೆ. ಅಬಕಾರಿ ಜಂಟಿ ಆಯುಕ್ತ ಶೈಲಜಾ ಎ. ಕೋಟೆ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ನಗರದ ಬಜಾಲ್‌ನ ಜೆ.ಎಂ. ರಸ್ತೆಯ ಮನೆಯೊಂದಕ್ಕೆ ದಾಳಿ ನಡೆಸಿದ ತಂಡ ಮದ್ಯಸಾರ ಸಹಿತ ವಾಹನಗಳನ್ನು ವಶಪಡಿಸಿ ಕೊಂಡಿದೆ. 35 ಲೀಟರ್ ಸಾಮರ್ಥ್ಯದ 113 ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ಸಂಗ್ರಹಿಸಿದ್ದ 3,955 ಲೀಟರ್ ಮದ್ಯಸಾರ, ಅಲ್ಲಿಯೇ ಇದ್ದ ಈಚರ್ ವಾಹನದಲ್ಲಿದ್ದ 35 ಲೀಟರ್ ಸಾಮರ್ಥ್ಯದ 110 ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ 3,850 ಲೀಟರ್ ಮದ್ಯಸಾರ ಸೇರಿದಂತೆ ಒಟ್ಟು 7,805 ಲೀಟರ್ ಮದ್ಯಸಾರ ಮತ್ತು ಇದರ ಸಾಗಣೆಗೆ ಬಳಸಿದ ಪಲ್ಸರ್ ಮೋಟಾರು ಬೈಕ್ ಪತ್ತೆಯಾಗಿದ್ದು, ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಅಧಿಕಾರಿಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ ಮೀನು ದಾಸ್ತಾನಿಡಲು ಬಳಸುವ 247 ಖಾಲಿ ಪ್ಲಾಸ್ಟಿಕ್ ಬಾಕ್ಸ್‌ಗಳು ಪತ್ತೆಯಾಗಿದೆ.

ಅಬಕಾರಿ ಅಧೀಕ್ಷಕ ವಿನೋದ್ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಉಪ ವಿಭಾಗ-1ರ ಅಬಕಾರಿ ಉಪ ಅಧೀಕ್ಷಕ ಅಮರನಾಥ ಎಸ್.ಎಸ್ ಭಂಡಾರಿ ಮತ್ತು ಉಪ ವಿಭಾಗ-2ರ ಅಬಕಾರಿ ಉಪ ಅಧೀಕ್ಷಕ ಶಿವ ಪ್ರಸಾದ್ ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಚೇತನ್ ಕುಮಾರ್, ಸತೀಶ್ ಕುಮಾರ್ ಕುದ್ರೋಳಿ, ಸುನೀತ, ಸೀಮ ಮರಿಯ ಸುವಾರಿಸ್, ಶೋಭಾ, ಅಬಕಾರಿ ಉಪ ನಿರೀಕ್ಷ ಪ್ರತಿಭಾ, ರಾಜ ಪಿ., ಜಗನ್ನಾಥ ನಾಯ್ಕಾ, ಶಿವಾನಂದ, ಕಮಲಾ, ಅಬಕಾರಿ ರಕ್ಷಕ ಸಾಯಿಪ್ರಸಾದ್ ಸುವರ್ಣ, ಉಮೇಶ್ ಎಚ್, ಹರೀಶ್, ಅರ್ಜುನ್ ಗೊಟಗುನಕಿ, ಜಯಪ್ಪ ಲಮಾಣಿ, ಕೃಷ್ಣ ಆಚಾರಿ, ಸುಪ್ರೀತ್ ಮತ್ತು ವಾಹನ ಚಾಲಕ ಶಿವಪ್ಪ, ಯೋಗೀಶ್, ಫ್ರಾನ್ಸಿಸ್ ಡಿಸೋಜ, ಸುನೀಲ್, ಹರಿಯಪ್ಪ, ಪ್ರಜ್ವಲ್ ಮತ್ತು ಉಮೇಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News