ಫೆ. 26ರಂದು ಕಲ್ಲಡ್ಕಕ್ಕೆ ಅಫ್ಸಲ್ ಖಾಸಿಮಿ

Update: 2018-02-21 10:10 GMT

ಬಂಟ್ವಾಳ, ಫೆ. 21: ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ಕಲ್ಲಡ್ಕ ಇದರ ವತಿಯಿಂದ ಫೆ. 26ರಂದು ಸಂಜೆ 7 ಗಂಟೆಗೆ "ಐಕ್ಯತೆ ಕಾಲದ ಬೇಡಿಕೆ" ಎಂಬ ವಿಷಯದಡಿ ಒಂದು ದಿನದ ಧಾರ್ಮಿಕ ಮತ ಪ್ರವಚನ ಕಲ್ಲಡ್ಕ  ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ನ ಅಧ್ಯಕ್ಷ ಅಶ್ರಫ್ ಅರಬಿ ಹೇಳಿದ್ದಾರೆ.

ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಹಾದಿ ಅಸೈಯದ್ ಇಬ್ರಾಹಿಂ ತಂಙಳ್ ಆತೂರು ದುವಾಃ ನೆರವೇರಿಸುವರು.

ಧಾರ್ಮಿಕ ಅಸೋಸಿಯೇಷನ್ ನ ಗೌರವಾಧ್ಯಕ್ಷ ಎಸ್.ಬಿ.ದಾರಿಮಿ ಉದ್ಘಾಟಿಸುವರು. ಅಕ್ಕರಂಗಡಿ ಜುಮಾ ಮಸೀದಿಯ ಮದರ್ರಿಸ್ ಕೆ.ಎಸ್. ಹೈದರ್ ದಾರಿಮಿ ಅಧ್ಯಕ್ಷತೆ ವಹಿಸುವರು. 'ಇಸ್ಲಾಮಿನಲ್ಲಿ ಐಕ್ಯತೆ ಮತ್ತು ಯುವಕ, ಯುವತಿಯರ ಪಾತ್ರ' ಎಂಬ ವಿಷಯದ ಕುರಿತು ಹಾಫಿಳ್ ಆಫ್ಸಲ್ ಖಾಸಿಮಿ ಕೊಲ್ಲಂ ಅವರು ಮುಖ್ಯ ಪ್ರಭಾಷಣ ಮಾಡುವರು  ಎಂದು ಮಾಹಿತಿ ನೀಡಿದರು.

ಎಐಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಫಝ್ ಸ್ವಾದಿಕ್ ಫೈಝಿ, ಪಿಎಫ್ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್, ಪಿ.ಬಿ.ಇಬ್ರಾಹಿಂ ಭಟ್ಕಳ, ಮುಸ್ತಫಾ ಕೆಂಪಿ, ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೈಲ್ ಕಂದಕ್,  ಝಕರಿಯಾ ಗೋಳ್ತಮಜಲು, ಲುಕ್ಮಾನ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ನ ಪದಾಧಿಕಾರಿಗಳಾದ ಝಮೀರ್, ನೌಫಲ್, ನಝ್ಮೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News