ಚಾರ್ಮಾಡಿ: ಫೆ. 23ರಂದು ಖುತುಬಿಯ್ಯತ್ ವಾರ್ಷಿಕ, ಧಾರ್ಮಿಕ ಪ್ರವಚನ

Update: 2018-02-21 11:19 GMT

ಬೆಳ್ತಂಗಡಿ, ಫೆ. 21: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಮುಹಿಯುದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಜಲಾಲಿಯ ನಗರ ಚಾರ್ಮಾಡಿ ಇದರ ಆಶ್ರಯದಲ್ಲಿ 29ನೆ ಖುತುಬಿಯ್ಯತ್ ವಾರ್ಷಿಕ ಹಾಗೂ ಒಂದು ದಿವಸದ ಧಾರ್ಮಿಕ ಮತ ಪ್ರವಚನ ಫೆ. 23ರಂದು ಸಂಜೆ 7ಕ್ಕೆ ಜಲಾಲಿಯ ನಗರದಲ್ಲಿ ಜರುಗಲಿದೆ.

ದಾರುಸ್ಸಲಾಂ ದಅವಾ ಕಾಲೇಜ್‌ನ ಕಾರ್ಯಾಧ್ಯಕ್ಷ ಅಸ್ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುಆ ನೆರವೇರಿಸಲಿದ್ದು, ಎಂಜೆಎಂ ಅಧ್ಯಕ್ಷ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕೇಂದ್ರ ಜುಮಾ ಮಸೀದಿ ಕಕ್ಕಿಂಜೆ ಇಲ್ಲಿನ ಮುದರ್ರಿಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ವಾಗ್ಮಿ ಶಮೀರ್ ದಾರಿಮಿ ಕೊಲ್ಲಂ ‘ಮರಣ ಎಂಬ ಮಹಾ ಅದ್ಬುತ’ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News