ಫೆ.23ರಂದು ಅಜ್ಜರಕಾಡು ಪುರಭವನದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ‘ಮಿ.ಕರ್ನಾಟಕ’

Update: 2018-02-21 12:37 GMT

ಉಡುಪಿ, ಫೆ. 21: ಉಡುಪಿಯ ಇ- ಫಿಟ್ನೆಸ್ ಕ್ಲಬ್‌ನ ಆತಿಥ್ಯದಲ್ಲಿ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್‌ ಉಡುಪಿ ಜಿಲ್ಲೆ ಇದರ ಸಹಭಾಗಿತ್ವ ದಲ್ಲಿ ರಾಜ್ಯಮಟ್ಟದ ಅಧಿಕೃತ ದೇಹದಾರ್ಢ್ಯ ಸ್ಪರ್ಧೆ ‘ಮಿ.ಕರ್ನಾಟಕ- 2018’ ಫೆ.23ರಂದು ಮಧ್ಯಾಹ್ನ 3ಗಂಟೆಯಿಂದ ಉಡುಪಿ ಅಜ್ಜರಕಾಡು ಪುರಭವನ ದಲ್ಲಿ ನಡೆಯಲಿದೆ.

ಸ್ಪರ್ಧೆಯನ್ನು ಕರ್ನಾಟಕ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್‌ ನಡೆಸಿ ಕೊಡಲಿದೆ. ಇದರಲ್ಲಿ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಉತ್ತಮ ಫಿಟ್‌ನೆಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಶಿವ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

55, 60, 65, 70, 75, 80, 85 ವರ್ಷ ಮತ್ತು 85ವರ್ಷಕ್ಕಿಂತ ಮೇಲ್ಪಟ್ಟ ವರ ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗದಲ್ಲಿ 1ರಿಂದ 5ನೆ ಸ್ಥಾನದವರೆಗೆ ನಗದು ಬಹುಮಾನ ನೀಡಲಾಗುವುದು. ಮಿ. ಕರ್ನಾಟಕ ಪ್ರಶಸ್ತಿ ವಿಜೇತರಿಗೆ 50ಸಾವಿರ ರೂ. ನಗದು ಮತ್ತು ಟ್ರೋಫಿ ನೀಡಲಾಗುವುದು. ಮೊದಲ ರನ್ನರ್ಸ್‌ಗೆ 20 ಸಾವಿರ ರೂ. ಮತ್ತು ಎರಡನೆ ರನ್ನರ್ಸ್‌ಗೆ 10 ಸಾವಿರ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಮಿಲಿಂದ್ ಸಾಲ್ಯಾನ್, ಕಾರ್ಯಾಧ್ಯಕ್ಷ ಜೇಸನ್ ಡಯಾಸ್, ವಿಶ್ವನಾಥ್ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News