ಕೇಸರಿ ಬಣ್ಣವು ರಾಷ್ಟ್ರಧ್ವಜಕ್ಕೆ ಸಂಪೂರ್ಣವಾಗಿ ಹರಡಬಾರದು: ಕಮಲ್ ಹಾಸನ್

Update: 2018-02-22 14:58 GMT

ಚೆನ್ನೈ, ಫೆ.22: ತನ್ನ ಹೊಸ ಪಕ್ಷವಾದ ‘ಮಕ್ಕಳ್ ನೀದಿ ಮಯ್ಯಮ್’ ಘೋಷಿಸಿ ಒಂದು ದಿನಗಳ ನಂತರ ಕಮಲ್ ಹಾಸನ್ ತಮಿಳು ಮ್ಯಾಗಝಿನ್ ವಿಕಟನ್ ನ ಅಂಕಣದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.

“ನಾನು ಕೇಸರಿ ಬಣ್ಣವನ್ನು ಅವಮಾನಿಸುತ್ತೇನೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ತಪ್ಪು. ನಮ್ಮ ರಾಷ್ಟ್ರಧ್ವಜದಲ್ಲೂ ಕೇಸರಿ ಬಣ್ಣವಿದೆ. ಆದರೆ ಕೇಸರಿ ಬಣ್ಣ ಇಡೀ ಧ್ವಜಕ್ಕೆ ಹರಡಬಾರದು ಎನ್ನುವುದು ನನ್ನ ಭಾವನೆ. ನಾವು ಇತರರನ್ನೂ ಗೌರವಿಸಬೇಕು. ನಾವು ಇದೇ ಪ್ರತಿಜ್ಞೆಯನ್ನು ಕೈಗೊಂಡವರಾಗಿದ್ದು, ಸಂವಿಧಾನ ಕೂಡ ಇದನ್ನೇ ಉಲ್ಲೇಖಿಸುತ್ತದೆ “ ಎಂದು ಹೇಳಿದ್ದಾರೆ.

ರಾಜಕೀಯದಿಂದ ‘ಜಾತ್ಯಾತೀತ’ ಪದವನ್ನು ತೆಗೆದುಹಾಕುವ ಬಗ್ಗೆ ಕೆಲವರು ಪ್ರತಿಜ್ಞೆ ಕೈಗೊಳ್ಳುತ್ತಿರುವ ವಿಡಿಯೋವೊಂದು ಯುಟ್ಯೂಬ್ ನಲ್ಲಿದೆ. ಮತ ಗಳಿಕೆಗಾಗಿ ನಾವು ಇಂತಹ ತ್ಯಾಗ ಮಾಡಬೇಕೇ? ನಾವು ಈ ರಾಜಕೀಯವನ್ನು ಬದಲಿಸಲು ಇಚ್ಛಿಸಿದ್ದೇನೆ” ಎಂದು ಕಮಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News