×
Ad

ಇರಾಕ್ ನಿಂದ ನರ್ಸ್ ಗಳನ್ನು ರಕ್ಷಿಸಿದ್ದು ನಾವು, ಅವರೆಲ್ಲರೂ ಕ್ರೈಸ್ತರಾಗಿದ್ದರು

Update: 2018-02-22 22:34 IST

ಮೇಘಾಲಯ, ಫೆ.22: ಐಸಿಸ್ ಹಿಡಿತದಲ್ಲಿದ್ದ ಕೇರಳದ ನರ್ಸ್ ಗಳನ್ನು ಭಾರತಕ್ಕೆ ಕರೆ ತಂದದ್ದು ನಮ್ಮ ಸರಕಾರ ಹಾಗು ಅವರೆಲ್ಲರೂ ಕ್ರೈಸ್ತರಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆಂದು thestatesman.com ವರದಿ ಮಾಡಿದೆ.

ಚುನಾವಣೆಯನ್ನು ಎದುರು ನೋಡುತ್ತಿರುವ ಮೇಘಾಲಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇಘಾಲಯದಲ್ಲಿ ಬದಲಾವಣೆಗೆ ಇದು ಸಕಾಲ. ಅಭಿವೃದ್ಧಿಯ ದೃಷ್ಟಿಯಿಂದ ಮೇಘಾಲಯದ ಜನರು ಬಿಜೆಪಿಗೆ ಮತ ನೀಡಬೇಕು ಎಂದರು.

ಅಧಿಕಾರ ಹಿಡಿದ ಸಂದರ್ಭ ಇರಾಕ್ ನಲ್ಲಿ ಐಸಿಸ್ ಉಗ್ರರ ಕಪಿಮುಷ್ಟಿಯಲ್ಲಿದ್ದ ಕೇರಳದ ನರ್ಸ್ ಗಳನ್ನು ಭಾರತಕ್ಕೆ ಕರೆತಂದದ್ದು ನಮ್ಮ ಸರಕಾರ. ಸುರಕ್ಷಿತವಾಗಿ ಭಾರತಕ್ಕೆ ತಲುಪಿದ ನರ್ಸ್ ಗಳೆಲ್ಲರೂ ಕ್ರೈಸ್ತರಾಗಿದ್ದರು ಎಂದು ಪ್ರಧಾನಿ ಹೇಳಿದರು.

“ಈಗಿರುವ ರಾಜ್ಯ ಸರಕಾರ 50 ವರ್ಷಗಳನ್ನು ವ್ಯರ್ಥ ಮಾಡಿದೆ. ರಾಜ್ಯದ ಸೇವೆ ಮಾಡಲು ನಮಗೆ ಒಂದು ಅವಕಾಶ ನೀಡಿ. ಸಬ್ಕಾ ಸಾತ್ ಸಬ್ಕಾ ವಿಕಾಸ್ ತತ್ವದಡಿ ನಾವು ಉತ್ತಮ ಆಡಳಿತ ನೀಡುತ್ತೇವೆ” ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News