ಮುಸ್ಲಿಮ್ ವಿರೋಧಿ ಘೋಷಣೆ ಕೂಗಿ ಸಿಖ್ ವ್ಯಕ್ತಿಯ ಪೇಟ ಎಳೆದ ಬಿಳಿಯ

Update: 2018-02-22 17:06 GMT

ಲಂಡನ್, ಫೆ. 22: ಬ್ರಿಟನ್ ಸಂಸತ್ತಿನ ಹೊರಗೆ ಸಿಖ್ ವ್ಯಕ್ತಿಯೋರ್ವರ ಪೇಟವನ್ನು ಬಿಳಿಯ ವ್ಯಕ್ತಿಯೊಬ್ಬ ಎಳೆದು ಹರಿದು ಹಾಕಿದ ಘಟನೆ ನಡೆದಿದೆ.

 ಲೇಬರ್ ಪಕ್ಷದ ಸಿಖ್ ಸಂಸದ ತನ್‌ಮನ್‌ಜೀತ್ ಸಿಂಗ್ ದೇಸಿಯನ್ನು ಭೇಟಿಯಾಗುವುದಕ್ಕಾಗಿ ಪಾರ್ಲಿಮೆಂಟ್ ಎಸ್ಟೇಟ್‌ನಲ್ಲಿರುವ ಪೋರ್ಟ್‌ಕಲಿಸ್ ಹೌಸ್ ಪ್ರವೇಶಿಸಲು ಕಾಯುತ್ತಿದ್ದಾಗ ಬುಧವಾರ ಹಲ್ಲೆ ನಡೆದಿದೆ ಎಂದು ಪಂಜಾಬ್ ನಿವಾಸಿ 37 ವರ್ಷದ ರವನೀತ್ ಸಿಂಗ್ ಹೇಳಿದ್ದಾರೆ.

ತಾನು ಸರದಿಯಲ್ಲಿ ನಿಂತಿದ್ದಾಗ, ‘ಮುಸ್ಲಿಮ್ ಗೋ ಬ್ಯಾಕ್’ (ಮುಸ್ಲಿಮ್ ವಾಪಸ್ ಹೋಗು) ಎಂದು ಕೂಗಿದ ವ್ಯಕ್ತಿಯೋರ್ವ ತನ್ನ ಬಳಿ ಬಂದು ತನ್ನ ಪೇಟವನ್ನು ಎಳೆಯಲು ಪ್ರಯತ್ನಿಸಿದನು ಎಂದು ಸಿಖ್ ಹೇಳಿದರು.

‘‘ಅವನು ನನ್ನ ಪೇಟವನ್ನು ಗಟ್ಟಿಯಾಗಿ ಎಳೆದನು. ಅದು ಅರ್ಧ ಜಾರಿತು. ಆಗ ನಾನು ಅದನ್ನು ಹಿಡಿದುಕೊಂಡೆ. ಆಗ ನಾನು ಅವನಿಗೆ ಜೋರು ಧ್ವನಿಯಲ್ಲಿ ಬೈದೆ. ಅವನು ಓಡಿ ಹೋದ’’ ಎಂದು ಸಿಂಗ್ ಹೇಳಿರುವುದಾಗಿ ‘ದಿ ಇಂಡಿಪೆಂಡೆಂಟ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News