ಗೋವನಿತಾಶ್ರಮ ವಿರುದ್ಧ ಪಾವೂರ್-ಮಲಾರ್ ಜಂಕ್ಷನ್ ನಲ್ಲಿ ಪ್ರತಿಭಟನೆ

Update: 2018-02-23 06:05 GMT

ಮಂಗಳೂರು, ಫೆ. 23: ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿರುವ ಗೋವನಿತಾಶ್ರಮದಲ್ಲಿ ನಡೆಯುವ ಅಕ್ರಮ ಚಟುವಟಿಕೆ ವಿರುದ್ಧ ಮುಸ್ಲಿಮ್ ಸೌಹಾರ್ದ ವೇದಿಕೆ ಮಲಾರ್ ವತಿಯಿಂದ ಪಾವೂರ್ - ಮಲಾರ್ ಜಂಕ್ಷನ್ ನಲ್ಲಿ  ಶುಕ್ರವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪ್ರತಿಭಟನೆ ನಡೆಯಿತು.

ಗೋವು ಸಾಕಣೆ ಮತ್ತು ವನಿತಾಶ್ರಮ ಕ್ರಿಮಿನಲ್ ಗಳಿಗೆ ಆಶ್ರಯ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ತಡೆಗಟ್ಟಬೇಕು, ಕ್ರಿಮಿನಲ್ ಗಳಿಗೆ ಆಶ್ರಯ ಕಲ್ಪಿಸಿದವರ ವಿರುದ್ಧ ಕೇಸು ದಾಖಲಿಸಬೇಕು, ಗೋವನಿತಾಶ್ರಮದಲ್ಲಿ ಮಾರಕಾಯುಧವಿರುವ ಸಾಧ್ಯತೆ ಇದ್ದು, ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ, ಕ್ರಮ ಜರಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

ಈ ಸಂದರ್ಭ ಮುಸ್ಲಿಮ್ ಸೌಹಾರ್ದ ವೇದಿಕೆ ಮಲಾರ್-ಪಾವೂರ್ ಇದರ ಪದಾಧಿಕಾರಿಗಳು, ಸ್ಥಳೀಯ ಮುಖಂಡರಾದ ಎಂ.ಟಿ. ನಿಸಾರ್, ಹಾರಿಸ್ ಮಲಾರ್, ಝಾಹಿದ್ ಮಲಾರ್, ಎಂ.ಆರ್. ನೌಶಾದ್, ವೇದಿಕೆಯ ಪ್ರಮುರಾದ ಟಿ. ನಾಸಿರ್, ರಿಯಾಝ್ ಗಾಡಿಗಡ್ಡೆ, ಅಲ್ತಾಫ್ ಸೈಟ್, ಕಬೀರ್, ರಹೀಮ್ ಡಿ., ಇರ್ಫಾನ್, ಝಕರಿಯಾ ಮಲಾರ್ ಹಾಗು ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News