×
Ad

ಮೇಘಾಲಯದ ‘ಮೋಸ್ಟ್ ವಾಂಟೆಡ್’ ಉಗ್ರ ಪೊಲೀಸ್ ಎನ್‌ಕೌಂಟರ್‌ಗೆ ಬಲಿ

Update: 2018-02-24 20:50 IST

ಶಿಲಾಂಗ್,ಫೆ.24: ಈಸ್ಟ್ ಗ್ಯಾರೊ ಹಿಲ್ಸ್ ಜಿಲ್ಲೆಯ ದೋಬು ಸಮೀಪದ ಅಚಕ್ಪೆಕ್ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದ ಗುಂಡಿನ ಕಾಳಗದಲ್ಲಿ ಮೇಘಾಲಯದ ‘ಮೋಸ್ಟ್ ವಾಂಟೆಡ್’ ಉಗ್ರ ಹಾಗೂ ನಿಷೇಧಿತ ಗ್ಯಾರೊ ನ್ಯಾಷನಲ್ ಲಿಬರೇಷನ್ ಆರ್ಮಿ(ಜಿಎನ್‌ಎಲ್‌ಎ)ಯ ಸ್ವಯಂಘೋಷಿತ ಮುಖ್ಯಸ್ಥ ಸೋಹನ್ ಡಿ ಶಿರಾ ಎಂಬಾತ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾನೆ.

ಸೋಹನ್ ತನ್ನ ತಲೆಯ ಮೇಲೆ 10 ಲಕ್ಷ ರೂ.ಗಳ ಬಹುಮಾನವನ್ನು ಹೊತ್ತಿದ್ದ. ಫೆ.18ರಂದು ಈಸ್ಟ್ ಗ್ಯಾರೊ ಹಿಲ್ಸ್‌ನ ಸಮಂದಾ ಪ್ರದೇಶದಲ್ಲಿ ಉಗ್ರರು ಸುಧಾರಿತ ಸ್ಪೋಟಕ ಸಾಧನವನ್ನು ಸ್ಫೋಟಿಸಿದ ಪರಿಣಾಮ ಮೇಘಾಲಯ ವಿಧಾನಸಭಾ ಚುನಾವಣೆಗೆ ಎನ್‌ಸಿಪಿ ಅಭ್ಯರ್ಥಿಯಾಗಿದ್ದ ಜೋನಾಥನ್ ಎನ್. ಸಂಗ್ಮಾ ಮತ್ತು ಇತರ ಮೂವರು ಕೊಲ್ಲಲ್ಪಟ್ಟಿದ್ದರು. ಸ್ಫೋಟದ ಹಿಂದೆ ಜಿಎನ್‌ಎಲ್‌ಎ ಕೈವಾಡವನ್ನು ಶಂಕಿಸಲಾಗಿತ್ತು. ಸಂಗ್ಮಾ ಹತ್ಯೆಯ ಬಳಿಕ ಚುನಾವಣೆಗಳು ಸನ್ನಿಹಿತವಾಗಿರುವ ದಕ್ಷಿಣ ಮತ್ತು ಪೂರ್ವ ಗ್ಯಾರೊ ಹಿಲ್ಸ್ ಜಿಲ್ಲೆಗಳಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗಳನ್ನು ಚುರುಕು ಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News