ರಖೈನ್‌ನಲ್ಲಿ ಸರಣಿ ಬಾಂಬ್ ಸ್ಫೋಟ

Update: 2018-02-24 16:28 GMT

ಬ್ಯಾಂಕಾಕ್,ಫೆ.24: ರೊಹಿಂಗ್ಯಾ ಮುಸ್ಲಿಮರ ಭೀಕರ ಹತ್ಯಾಕಾಂಡಕ್ಕೆ ಸಾಕ್ಷಿಯಾದ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಶನಿವಾರ ಸರಣಿ ಬಾಂಬ್ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಕನಿಷ್ಠ ಓರ್ವ ಪೊಲೀಸ್ ಸಾವನ್ನಪ್ಪಿದ್ದಾನೆ.

ರಖೈನ್ ರಾಜ್ಯದ ರಾಜಧಾನಿ ಸಿಟ್ವೆನಲ್ಲಿ ಮುಂಜಾನೆ 4:00 ಗಂಟೆ ವೇಳೆಗೆ ಮೂರು ಬಾಂಬ್‌ಗಳು ಸ್ಫೋಟಿಸಿವೆ. ಇತರ ಮೂರು ಬಾಂಬ್‌ಗಳು ಸ್ಪೋಟಗೊಳ್ಳದೆ ಉಳಿದಿದ್ದು, ಅವುಗಳನ್ನು ಭದ್ರತಾಪಡೆಗಳು ನಿಷ್ಕ್ರಿಯಗೊಳಿಸಿದ್ದಾರೆ. ರಖೈನ್ ರಾಜ್ಯದ ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರ ನಿವಾಸದ ಮುಂದೆಯೇ ಬಾಂಬೊಂದು ಸ್ಪೋಟಿಸಿದೆ ಎಂದು ರಾಜ್ಯ ಪೊಲೀಸ್ ಅಧಿಕಾರಿ ಆಂಗ್ ಮ್ಯಾಟ್ ಮೊ ತಿಳಿಸಿದ್ದಾರೆ.

 ಘಟನೆಯಲ್ಲಿ ಓರ್ವ ಪೊಲೀಸ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ’’ ಎಂದವರು ತಿಳಿಸಿದ್ದಾರೆ. ಕಳೆದ ತಿಂಗಳು ರಖೈನ್ ರಾಜ್ಯದ ಪುರಾತನ ನಗರ ಮ್ರಾಕ್-ಯುನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬೌದ್ಧ ತೀವ್ರವಾದಿಗಳು ಹಿಂಸಾಚಾರಕ್ಕಿಳಿದಾಗ ಅವರ ಮೇಲೆ ಪೊಲೀಸರು ಗುಂಡುಹಾರಿಸಿದ್ದರು ಹಾಗೂ ಘಟನೆಯಲ್ಲಿ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಆನಂತರ ಸ್ಥಳೀಯ ನಗರಾಡಳಿತದ ಅಧಿಕಾರಿಯೊಬ್ಬರನ್ನು ಅವರ ಕಾರಿನಲ್ಲೇ ಹತ್ಯೆಗೈಯಲಾಗಿತ್ತು.

2012ರಲ್ಲಿ ರಖೈನ್ ರಾಜ್ಯದ ಸಿಟ್ವೆ ನಗರದಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ 1.20 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ನಿರಾಶ್ರಿತರಾಗಿದ್ದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ರಖೈನ್ ರಾಜ್ಯದಲ್ಲಿ ಮ್ಯಾನ್ಮಾರ್ ಸೈನಿಕರು ದೌರ್ಜನ್ಯಕ್ಕೆ ಬೆದರಿ 7 ಲಕ್ಷಕ್ಕೂ ಅಧಿಕ ರೊಹಿಂಗ್ಯಾಗಳು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News