ನಾನು ಭಾರತೀಯ ಮಾಧ್ಯಮವನ್ನು ಪ್ರೀತಿಸುತ್ತೇನೆ: ಜೂನಿಯರ್ ಟ್ರಂಪ್

Update: 2018-02-24 17:13 GMT

ಹೊಸದಿಲ್ಲಿ, ಫೆ.24: ಭಾರತೀಯ ಮಾಧ್ಯಮವನ್ನು ನಾನು ಪ್ರೀತಿಸುತ್ತೇನೆ. ಅಮೆರಿಕದ ಆಕ್ರಮಣಕಾರಿ ಮತ್ತು ಕ್ರೂರಿ ಮಾಧ್ಯಮಕ್ಕೆ ಹೋಲಿಸಿದರೆ ಭಾರತೀಯ ಮಾಧ್ಯಮವು ಸೌಮ್ಯ ಮತ್ತು ಸಾಧುವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಜೂನಿಯರ್ ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾಗತಿಕ ವ್ಯವಹಾರ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಜೂನಿಯರ್ ಟ್ರಂಪ್, ಭಾರತದ ಇತಿಹಾಸದಲ್ಲೇ ಭಾರತೀಯ ಮಾಧ್ಯಮವನ್ನು ಪ್ರೀತಿಸುತ್ತೇನೆ ಎಂದು ಹೇಳಿರುವ ಮೊದಲ ವ್ಯಕ್ತಿ ನಾನು. ಅದು ಅಷ್ಟು ಸೌಮ್ಯ ಮತ್ತು ಸಾಧುವಾಗಿದೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ನಾನು ಮೊದಲ ಬಾರಿ ಆಗಮಿಸುತ್ತಿಲ್ಲ. ಆದರೆ ಹತ್ತು ವರ್ಷಗಳ ನಂತರ ಭೇಟಿ ನೀಡುತ್ತಿದ್ದೇನೆ. ಹಾಗಾಗಿ ನಾನು ಹೇಳಿದ ಮಾತಿನ ಅರ್ಥ ಎಲ್ಲರಿಗೂ ತಿಳಿದಿರಬಹುದು. ಆದರೆ ಅದರ ಮರುದಿನವೇ ವಾಷಿಂಗ್ಟನ್ ಪೋಸ್ಟ್, ನಾನು ಬಡವರನ್ನು ಇಷ್ಟಪಡುತ್ತೇನೆ. ಯಾಕೆಂದರೆ ಅವರು ನಗುತ್ತಾರೆ ಎಂದು ವರದಿ ಮಾಡಿತ್ತು ಎಂದು ಟ್ರಂಪ್ ಪುತ್ರ ತಿಳಿಸಿದ್ದಾರೆ.

ಈ ವೇಳೆ ಅವರು, ನಾನು ಇಲ್ಲಿಗೆ ಆಗಮಿಸಿರುವುದು ವ್ಯವಹಾರಕ್ಕಾಗಿ ರಾಜಕಾರಣಗಳಿಗಾಗಿ ಅಲ್ಲ ಎಂದು ಹೇಳುವ ಮೂಲಕ ರಾಜಕೀಯದ ಬಗ್ಗೆ ಮಾತನಾಡಲು ನಿರಾಕರಿಸಿದರು. ಚೀನಾ ಕುರಿತು ಯಾವ ಹೇಳಿಕೆಯನ್ನು ನೀಡಲು ನಿರಾಕರಿಸಿದ ಟ್ರಂಪ್ ಪುತ್ರ ನನ್ನ ಸದ್ಯದ ಪ್ರಾಮುಖ್ಯತೆ ಭಾರತ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ವ್ಯವಹಾರ ಕ್ಷೇತ್ರದಲ್ಲಿ ಉಂಟಾಗಿರುವ ಬದಲಾವಣೆಯ ಕುರಿತು ಮಾತನಾಡಿದ ಟ್ರಂಪ್, ಈಗ ಭಾರತದಲ್ಲಿ ಸಾಕಷ್ಟು ಸಾಮರ್ಥ್ಯ ಮತ್ತು ಶಕ್ತಿಯಿದೆ. ಕಳೆದ ಕೆಲವು ವರ್ಷಗಳಲ್ಲಿ ನಾನು ಹಲವು ಉತ್ತಮ ಒಪ್ಪಂದಗಳನ್ನು ಮಾಡಿದ್ದೇನೆ. ಈಗ ನಾನು ಭಾರತದಲ್ಲಿ ಹತ್ತು ಪಟ್ಟು ಹೆಚ್ಚು ಹೂಡಿಕೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News