ಬೇರೆ ಕೆಲಸ ನೋಡಿಕೊಳ್ಳಿ: ತನ್ನ ಉದ್ಯೋಗಿಗಳಿಗೆ ಮೆಹುಲ್ ಚೋಕ್ಸಿ ಪತ್ರ

Update: 2018-02-24 17:24 GMT

ಹೊಸದಿಲ್ಲಿ, ಫೆ. 24: ಮೆಹುಲ್ ಚೋಕ್ಸಿ ತನ್ನ ಕಂಪೆನಿಗಳ ಉದ್ಯೋಗಿಗಳಿಗೆ ಬಹಿರಂಗ ಪತ್ರ ಬರೆದು ‘‘ತನಗೆ ವೇತನ ನೀಡಲು ಸಾಧ್ಯವಿಲ್ಲ. ಬೇರೆ ಉದ್ಯೋಗ ನೋಡಿಕೊಳ್ಳಿ’’ ಎಂದು ಹೇಳಿದ್ದಾರೆ. ಚೋಕ್ಸಿ ವಕೀಲ ಸಂಜಯ್ ಅಬ್ಬೋಟ್ ಬಿಡುಗಡೆ ಮಾಡಿದ ಪತ್ರದಲ್ಲಿ, ಚೋಕ್ಸಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಹಾಗೂ ‘ವೇತನವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಲು ಸಾಧ್ಯವಾಗಲಾರದು’ ಎಂದು ಹೇಳಿದ್ದಾರೆ. ಚೋಕ್ಸಿ ಕಂಪೆನಿಗಳು, ಗೀತಾಂಜಲಿ ಜೆಮ್ಸ್‌ನಲ್ಲಿ 3,500ಕ್ಕೂ ಅಧಿಕ ಸಿಬ್ಬಂದಿಯಿದ್ದಾರೆ.

ದತ್ತಾಂಶ ಬಹಿರಂಗವಾಗಿಲ್ಲ

ಗ್ರಾಹಕರ ದತ್ತಾಂಶ ಬಹಿರಂಗವಾಗಿರುವುದನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿರಾಕರಿಸಿದೆ. ಬ್ಯಾಂಕ್‌ನ ಭದ್ರತಾ ಸೌಕರ್ಯ ಸಾಕಷ್ಟು ಬಲಿಷ್ಠವಾಗಿದೆ. ಗ್ರಾಹಕರ ದತ್ತಾಂಶವನ್ನು ಸುರಕ್ಷಿತವಾಗಿರಿಸಲು ಬ್ಯಾಂಕ್ ಎಲ್ಲ ಅತ್ಯಗತ್ಯದ ತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ ಎಂದು ಪಿಎನ್‌ಬಿ ಬಾಂಬೆ ಶೇರು ವಿನಿಮಯ ಕೇಂದ್ರಕ್ಕೆ ನೀಡಿದ ಸ್ಪಷ್ಟನೆಯಲ್ಲಿ ತಿಳಿಸಿದೆ.

10 ಸಾವಿರಕ್ಕೂ ಅಧಿಕ ಇಂಪೋರ್ಟೆಡ್ ವಾಚ್ ವಶ

ಕಳೆದ ಕೆಲವು ದಿನಗಳಿಂದ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದ್ದು, ನೀರವ್ ಮೋದಿಗೆ ಸೇರಿದ ಹಲವು ಸ್ಥಳಗಳಲ್ಲಿ 60 ಪ್ಲಾಸ್ಟಿಕ್ ಕಂಟೈನರ್‌ಗಳಲ್ಲಿ ದಾಸ್ತಾನು ಇರಿಸಲಾಗಿದ್ದ 10 ಸಾವಿರಕ್ಕೂ ಅಧಿಕ ಆಮದು ವಾಚ್‌ಗಳನ್ನು ವಶಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News