ಮಣಿಪಾಲ ಯುಪಿಎಂ ಸರ್ಕಲ್‌ನಲ್ಲಿ ‘ಕಾಯಿನ್‌ಏಜ್’ ಅನಾವರಣ

Update: 2018-02-25 13:38 GMT

ಉಡುಪಿ, ಫೆ.25: ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಕಂಟ್ರಿ ಇನ್ ಹೊಟೇಲಿನ ಬಳಿ ನಿರ್ಮಿಸಿರುವ ತೋನ್ಸೆ ಟಿ.ಉಪೇಂದ್ರ ಪೈ ಸ್ಮಾರಕ ಸರ್ಕಲ್ ನಲ್ಲಿ ಸ್ಥಾಪಿಸಲಾಗಿರುವ ‘ಕಾಯಿನ್‌ಏಜ್’ ಶಿಲ್ಪಾ ಕಲಾಕೃತಿಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಣಿಪಾಲ ಟೆಕ್ನಾಲಜಿ ಲಿಮಿಟೆಡ್‌ನ ಅಧ್ಯಕ್ಷ ಟಿ.ಸತೀಶ್ ಯು. ಪೈ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ, ಕಲಾವಿದ ಎಲ್.ಎನ್.ತಲ್ಲೂರು ಉಪಸ್ಥಿತರಿದ್ದರು.

ತರಂಗದ ಸಂಪಾದಕಿ ಸಂಧ್ಯಾ ಎಸ್.ಪೈ ಉಪೇಂದ್ರ ಪೈ ಅವರ ಕುರಿತು ಮತ್ತು ವನಿತಾ ಪೈ ಕಲಾಕೃತಿಯ ಕುರಿತು ಮಾಹಿತಿ ನೀಡಿದರು. ಮಣಿಪಾಲ ಟೆಕ್ನಾಲಜಿಯ ಆಡಳಿತ ನಿರ್ದೇಶಕ ಗೌತಮ್ ಪೈ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಯ್ ಗುಪ್ತ ವಂದಿಸಿದರು. ಉಷಾ ಕಾರ್ಯಕ್ರಮ ನಿರೂಪಿಸಿದರು.

ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಎಲ್.ಎನ್.ತಲ್ಲೂರು ಕಲ್ಪನೆಯಲ್ಲಿ ಮೂಡಿಬಂದ ಈ ಕಲಾಕೃತಿಯನ್ನು ಮಿಲ್ಲಿಂಗ್ ತಂತ್ರಜ್ಞಾನದಲ್ಲಿ ರಚಿಸಲಾಗಿದೆ. ಈ ಕಲಾಕೃತಿ 6.5ಟನ್ ಭಾರ, 27 ಅಡಿ ಎತ್ತರ ಹೊಂದಿದೆ. ಆರ್ಥಿಕತೆ, ಸಂಸ್ಕೃತಿ, ಬ್ಯಾಂಕಿಂಗ್, ಇತಿಹಾಸವನ್ನು ಬಿಂಬಿಸುವ ಏಳು ನಾಣ್ಯ ಕಲಾಕೃತಿಗಳು ಇದರಲ್ಲಿವೆ. ಈ ಕಲಾಕೃತಿಯನ್ನು ಪರಿಚಯಿಸುವ ಫಲಕವನ್ನು ಸರ್ಕಲ್ ಸಮೀಪದಲ್ಲೇ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News