×
Ad

ಕೇಂದ್ರ ಸರಕಾರದ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ ಆಂಧ್ರ ಸಿಎಂ

Update: 2018-02-26 15:01 IST

 ವಿಶಾಖಪಟ್ಟಣ,ಫೆ.26: ದಕ್ಷಿಣ ಭಾರತದ ರಾಜ್ಯಕ್ಕೆ ಕೇಂದ್ರ ಸರಕಾರ ತನ್ನ ಭರವಸೆ ಈಡೇರಿಸಲು ವಿಫಲವಾಗಿದೆ ಎಂದು ತಿಳಿಸಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನೇ ವೇದಿಕೆಯಾಗಿ ಬಳಸಿಕೊಂಡಿದ್ದಾರೆ.

   ಸಮ್ಮೇಳನದ ಕೊನೆಯ ದಿನವಾದ ಸೋಮವಾರ ಮಾತನಾಡಿದ ನಾಯ್ಡು‘‘ ರಾಜ್ಯಕ್ಕೆ ನೀಡಿರುವ ಭರವಸೆಯನ್ನು ಈಡೇರಿಸದ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಜನತೆ ಆಕ್ರೋಶಗೊಂಡಿದ್ದಾರೆ. ಅವಿಭಜಿತ ರಾಜ್ಯವು ತೆಲಂಗಾಣವಾಗಿ ವಿಭಜನೆಗೊಂಡ ಬಳಿಕ ಆಂಧ್ರಪ್ರದೇಶ ರಾಜ್ಯ ಕೇಂದ್ರದ ನಿರ್ಲಕ್ಷಕ್ಕೆ ಒಳಗಾಗಿದೆ. ನಮಗೆ ಎಲ್ಲ ವಿಭಾಗದಲ್ಲೂ ಅನ್ಯಾಯವಾಗಿದೆ. ಕೇಂದ್ರ ತನ್ನ ಬದ್ಧತೆಯನ್ನು ಈಡೇರಿಸಿಲ್ಲ. ನಾವು ನಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಸರಕಾರದ ಮೇಲೆ ರಾಜ್ಯದ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರೀಕ್ಷೆ ಈಡೇರಿಸಲು ಎಲ್ಲ ಪ್ರಯತ್ನ ಪಡುತ್ತಿದ್ದೇವೆ’’ ಎಂದು ಕೇಂದ್ರದ ಎನ್‌ಡಿಎ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಂಡಿರುವ ತೆಲುಗು ದೇಶಂ ಪಕ್ಷದ ಅಧ್ಯಕ್ಷ ನಾಯ್ಡು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News