ಯೂತ್ ಲೀಗ್ ಕಾರ್ಯಕರ್ತನ ಹತ್ಯೆ: ಐವರ ಬಂಧನ
ಮಣ್ಣಾರ್‍ಕ್ಕಾಡ್( ಕೇರಳ),ಫೆ. 26: ಮಣ್ಣಾರ್‍ಕ್ಕಾಡ್ ಕೋರ್ಟುಪ್ಪಡಿಯಲ್ಲಿ ಬಟ್ಟೆಯಂಗಡಿಯಲ್ಲಿ ನಡೆದ ಕುಂದಪ್ಪುಯ ಎಂಬಲ್ಲಿನ ಸಫೀರ್(23) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿದ್ದಾರೆ. ಮಣ್ಣಾರ್‍ಕ್ಕಾಡ್ ನಿವಾಸಿಗಳಾದ ಬಶೀರ್, ರಶೀದ್, ಮುಹಮ್ಮದ್ ಸಹಲ್, ಅಜೀಶ್, ಸಜಿಲ್ ಕಸ್ಟಡಿಯಲ್ಲಿದ್ದು ಇವರೆಲ್ಲರೂ ಕೊಲೆಯಾದ ಸಫೀರ್‍ನ ನೆರೆಮನೆಯವರು . ಇದು ರಾಜಕೀಯ ಹತ್ಯೆಯಲ್ಲ ವೈಯಕ್ತಿಕ ದ್ವೇಷ ಕೊಲೆಕೃತ್ಯಕ್ಕೆ ಪ್ರೇರಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಕೃತ್ಯವನ್ನು ಖಂಡಿಸಿ ಮಣ್ಣಾರ್‍ಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂಲೀಗ್ ನೀಡಿದ ಕರೆಯಂತೆ ಹರತಾಳ ಆರಂಭಗೊಂಡಿದೆ. ವ್ಯಾಪಾರಿ ಸಂಘಟನೆ ಕೂಡಾ ಹರತಾಳಕ್ಕೆಕರೆ ನೀಡಿದೆ. ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಸಫೀರ್ ಮೃತದೇಹ ಮಣ್ಣಾರ್‍ಕ್ಕಾಡ್ ತಾಲೂಕು ಆಸ್ಪ್ರತ್ರೆಯಲ್ಲಿರಿಸಲಾಗಿದೆ.
ಮಣ್ಣಾರ್‍ಕ್ಕಾಡ್ ನಗರಸಭಾ ಕೌನ್ಸಿಲರ್ ಸಿರಾಜುದ್ದೀನ್ ಎನ್ನುವವರ ಪುತ್ರ ಸಫೀರ್ ಆಗಿದ್ದು, ರವಿವಾರ ರಾತ್ರಿ ಒಂಬತ್ತು ಗಂಟೆಗೆ ಆತನಿಗೆ ಆತನದೇ ಬಟ್ಟೆ ಅಂಗಡಿಯಲ್ಲಿ ಮಾರಕಾಯುಧಗಳಿಂದ ಇರಿಯಲಾಗಿತ್ತು. ಗಂಭೀರ ಗಾಯಗೊಂಡಿದ್ದ ಸಫೀಕ್ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಫೀರ್ ಯೂತ್ ಲೀಗ್ ಮತ್ತು ಎಂಎಸ್‍ಎಫ್ ಕಾರ್ಯಕರ್ತನಾಗಿದ್ದರು.