ಕನ್ನಂಗಾರ್‌ನಲ್ಲಿ ಅಂತರ್‌ರಾಜ್ಯಮಟ್ಟದ ದಫ್ ಸ್ಪರ್ಧೆ: ಕುಂದಾಪುರ ಹಲವಳ್ಳಿ ಖಿಲ್ರಿಯಾ ಪ್ರಥಮ

Update: 2018-02-26 20:05 GMT

ಪಡುಬಿದ್ರೆ, ಫೆ. 26 : ಕನ್ನಂಗಾರ್‌ನ ಎಂಎಫ್‌ಸಿ ಫ್ರೆಂಡ್ಸ್ ಕನ್ನಂಗಾರ್ ಜುಮಾ ಮಸೀದಿ ವಠಾರದಲ್ಲಿ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ವೇದಿಕೆಯಲ್ಲಿ   ಆಯೋಜಿಸಿದ ಅಂತರ್‌ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ ಗಮನಸೆಳೆಯಿತು.

ಸ್ಪರ್ಧಾ ಕೂಟದಲ್ಲಿ ಕುಂದಾಪುರದ ಹಲವಳ್ಳಿಯ ಖಿಲ್ರಿಯಾ ದಫ್ ಸಮಿತಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ದ್ವಿತೀಯ ಕೂಳೂರಿನ ರಿಫಾಯಿ ದಫ್ ಪಂಜಿಮೊಗರು ಮತ್ತು ತೃತೀಯ ಕಾಪು ಮಜೂರಿನ ಸಿರಾಜುಲ್ ಹುದಾ ದಫ್ ಸಮಿತಿ ಪಡೆದುಕೊಂಡಿತು. ವಿಜೇತ ತಂಡಗಳಿಗೆ ಟ್ರೋಫಿ ಸಹಿತ ನಗದನ್ನು ನೀಡಿ ಗೌರವಿಸಲಾಯಿತು. ಉತ್ತಮ ಹಾಡುಗಾರನಾಗಿ ಮಶೂಫ್ ಶಿರ್ವ ಆಯ್ಕೆಯಾದರು. ಸ್ಪರ್ಧೆಯಲ್ಲಿ ಒಟ್ಟು 23 ತಂಡಗಳು ಭಾಗವಹಿಸಿತ್ತು.

ಅಸಯ್ಯದ್ ಶಿಹಾಬುದ್ದೀನ್ ಅಲ್‌ಹೈದ್ರೋಸಿ ತಂಙಳ್ ಕಿಲ್ಲೂರು ದುವಾ ನೆರವೇರಿಸಿದರು. ಕನ್ನಂಗಾರ್ ಜುಮಾ ಮಸೀದಿ ಮುದರ್ರಿಸ್ ಅಲ್‌ಹಾಜ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಎಂಎಫ್‌ಸಿ ಕನ್ನಂಗಾರ್ ಅಧ್ಯಕ್ಷ ಟಿ.ಕೆ.ಅಬ್ದುಲ್ ಖಾದರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಕಾಪು ಶಾಸಕ ವಿನಯಕುಮಾರ್ ಸೊರಕೆ, ಕನ್ನಂಗಾರ್ ಜುಮ್ಮಾ ಮಸೀದಿ ಅಧ್ಯಕ್ಷ ಎಚ್.ಬಿ. ಮುಹಮ್ಮದ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಮುಕ್ರಿ ಹಾಜಿ ಕನ್ನಂಗಾರ್, ಉಡುಪಿ ತಾಲೂಕು ಕೆಡಿಪಿ ಸದಸ್ಯ ಅಬ್ದುಲ್ ಹಮೀದ್ ಮಿಲಾಫ್, ಕನ್ನಂಗಾರ್‌ನ ವಿವಿಧ ಮಸೀದಿಗಳ ಖತೀಬರಾದ ಅಬುಲ್ ಬುಶ್ರ ಬಿ.ಕೆ. ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್, ಜಿ.ಎಂ. ಸಿರಾಜುದ್ದೀನ್ ಸಖಾಫಿ, ಮುಹಮ್ಮದ್ ರಫೀಕ್ ಸಖಾಫಿ, ಮುಹಮ್ಮದ್ ಹನೀಫ್ ಅಹ್ಸನಿ, ಮೊದು ಹಾಜಿ ಬಿಲೀಫ್ ಶ್ಯಾಕೋ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀರ್ ಕನ್ನಂಗಾರ್, ಉದ್ಯಮಿ ಮುಝೈನ್ ಅಹ್ಮದ್, ಹಾಫಿಳ್ ಯೂಸುಫ್ ಸಿದ್ದೀಕ್ ಸಖಾಫಿ, ನಾಸಿರ್ ಸಅದಿ, ಜಮಾಲುದ್ದೀನ್ ಝುಹರಿ, ಅವರಾಲು ಮಟ್ಟು ಮುಹಮ್ಮದೀಯ ಮದ್ರಸ ಅಧ್ಯಕ್ಷ ಹುಸೈನ್ ಮಟ್ಟು, ಎಸ್‌ವೈಎಸ್ ಕನ್ನಂಗಾರ್ ಶಾಖೆಯ ಮಾಜಿ ಅಧ್ಯಕ್ಷ ಬಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಹುಸೈನ್ ಮುಸ್ಲಿಯಾರ್ ಖಿರಾಅತ್ ಪಠಿಸಿದರು. ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಅರ್ಷದ್ ಕುಂದಾಪುರ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News