ಮಾ.2-9ರವರೆಗೆ ಎಮ್ಮೆಮಾಡು ಮಖಾಂ ಉರೂಸ್

Update: 2018-02-27 07:23 GMT

ಮಂಗಳೂರು, ಫೆ.27: ಕೊಡಗಿನ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಮಾ.2ರಿಂದ ಮಾ.9ರವರೆಗೆ ನಡೆಯಲಿದೆ ಎಂದು ಝೈನುಲ್ ಆಬಿದ್ ಸಅದಿ ಹೇಳಿದರು.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಸಂದರ್ಭ ಸಾಮೂಹಿಕ ವಿವಾಹ, ದ್ಸಿಕ್ರ್ ಹಲ್ಕಾ, ಧಾರ್ಮಿಕ ಪ್ರವಚನ, ಖತ್ಮುಲ್ ಕುರ್‌ಆನ್, ಸಾಂಸ್ಕೃತಿಕ ಮತ್ತು ರಾಜಕೀಯ ಸಮ್ಮೇಳನ, ಪ್ರಾರ್ಥನಾ ಮಜ್ಲಿಸ್‌ಗಳು ನಡೆಯಲಿವೆ ಎಂದರು.

ಮಾ.2ರಂದು ಅಪರಾಹ್ನ 2ಕ್ಕೆ ಸೈಯದ್ ಹಾಮಿದ್ ಕೋಯಮ್ಮ ತಂಙಳ್ ಮಾಟ್ಟೂಲ್‌ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸೈಯದ್ ಮುನವ್ವರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿರುವರು.

ಮಾ.5ರಂದು ಸೈಯದ್ ಆಟಕ್ಕೋಯ ತಂಙಳ್ ಕುಂಬೋಳ್‌ರ ದುಆದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸೈಯದ್ ಇಬ್ರಾಹೀಂ ಖಲೀಲ್ ಬುಖಾರಿ ಕಡಲುಂಡಿ, ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಾಪುರಂ, ಸಚಿವರಾದ ಯು.ಟಿ.ಖಾದರ್, ತನ್ವೀರ್ ಸೇಠ್, ಎಂ.ಆರ್.ಸೀತಾರಾಂ ಭಾಗವಹಿಸಲಿದ್ದಾರೆ. ಆಧ್ಯಾತ್ಮಿಕ ವೇದಿಕೆಗಳಿಗೆ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಸೈಯದ್ ಜಅಫರ್ ಸಾದಿಕ್ ತಂಙಳ್ ಕುಂಬೋಳ್, ಸೈಯದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ, ಸೈಯದ್ ಸಾಲಿಂ ಸಖಾಫಿ ಅಲ್ ಬುಖಾರಿ ನೇತೃತ್ವ ವಹಿಸುವರು. ಮಾ.9ರಂದು ನಡೆಯುವ ಸಮಾರೋಪ ಸಮಾರಂಭವನ್ನು ಪ್ರೊ.ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಭಾಷಣ ಮಾಡಲಿದ್ದಾರೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಇಬ್ರಾನ್ ಸಅದಿ, ಶಂಸುದ್ದೀನ್ ಸಖಾಫಿ, ಬದ್ರುದ್ದೀನ್ ಸಅದಿ, ಸಂಶುದ್ದೀನ್ ಪಡಿಯಾನಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News