ಎ. 6ರಿಂದ ಕಾಜೂರು ಉರೂಸ್

Update: 2018-02-28 06:02 GMT

ಬೆಳ್ತಂಗಡಿ, ಫೆ. 28:  ಸುಮಾರು 800 ವರ್ಷಗಳ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಜೂರು ರಹ್ಮಾನಿಯಾ ಜುಮಾ ಮಸೀದಿ ಮತ್ತು ದರ್ಗಾ ಶರೀಫ್‌ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು  ಎ. 6 ರಿಂದ 15ರ ವರೆಗೆ ನಡೆಸುವುದೆಂದು ತೀರ್ಮಾನಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಕರಣಾಂತರದಿಂದ ನಿಂತು ಹೋಗಿರುವ ಉರೂಸ್ ಅಸೈಯ್ಯದ್ ಕೆ.ಎಸ್ ಅಟಕೊಯ ತಂಙಳ್ ಕುಂಬೋಳ್‌ ಅವರ ಆಶಯದಂತೆ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಇಚ್ಚೆಯಂತೆ ಖತೀಬ್ ಆಗಿ ಸೇವೆಸಲ್ಲಿಸುತ್ತಿರುವ  ಅಸೈಯದ್ ಕೆ.ಪಿ.ಎಸ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಹಾಗೂ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು ಅವರ ಅಧ್ಯಕ್ಷತೆಯಲ್ಲಿ, ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಕೆ. ಶಾಹುಲ್ ಹಮೀದ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳಾದ ಆಡಳಿತಾಧಿಕಾರಿ, ಮಾಜಿ ಸೈನಿಕ ಮಹಮ್ಮದ್ ರಫಿ, ಕೆ.ಯು. ಇಬ್ರಾಹಿಂ, ಬಿ.ಎ. ಯೂಸುಫ್ ಶರೀಫ್, ಬಿ.ಎಚ್. ಹಮೀದ್, ಎಮ್ ಅಬೂಬಕರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News