×
Ad

ವಾಟ್ಸ್ಯಾಪ್ ನಲ್ಲಿ ಶೀಘ್ರವೇ ಕಾಣಿಸಲಿದೆ ಹೊಸ 'ಫಾರ್‌ವರ್ಡೆಡ್ ಮೆಸೇಜ್' ಸಂಕೇತ

Update: 2018-03-01 16:11 IST

ವಾಟ್ಸಾಪ್ ಶೀಘ್ರವೇ ಇನ್ನೊಬ್ಬರಿಂದ ಫಾರ್‌ವರ್ಡ್ ಮಾಡಲ್ಪಟ್ಟ ಸಂದೇಶಗಳು ಮತ್ತು ಚಾಟ್‌ಗಳನ್ನು 'ಫಾರ್‌ವರ್ಡೆಡ್ ಮೆಸೇಜ್' ಎಂದು ಗುರುತಿಸುವ ಫೀಚರ್‌ನ್ನು ಹೊಂದಬಹುದು. ಹೊಸ ವಾಟ್ಸಾಪ್ ಫೀಚರ್‌ಗಳನ್ನು ಪರೀಕ್ಷಿಸುವ ವಾಬೀಟಾಇನ್ಫೋ ತಾಣವು ವರದಿ ಮಾಡಿರುವಂತೆ 'ಫಾರ್‌ವರ್ಡೆಡ್ ಮೆಸೇಜ್' ಫೀಚರ್ ಆ್ಯಂಡ್ರಾಯ್ಡಾ ಬೀಟಾ ವರ್ಷನ್ 2.18.67ರಲ್ಲಿ ಲಭ್ಯವಿದ್ದು, ಸದ್ಯಕ್ಕೆ ಅದನ್ನು ಸ್ಥಗಿತಗೊಳಿಸಲಾಗಿದೆ. ಬಳಕೆದಾರರು ವಾಟ್ಸಾಪ್ ಗೂಗಲ್ ಪ್ಲೇ ಸ್ಟೋರ್‌ನ ಮೂಲಕ ಬೀಟಾ ಪೋಗ್ರಾಮ್‌ಗೆ ಸೇರ್ಪಡೆಯಾದರೆ ಪರೀಕ್ಷೆಯಲ್ಲಿರುವ ಇತ್ತೀಚಿನ ಫೀಚರ್‌ಗಳು ಅವರಿಗೆ ಲಭ್ಯವಾಗುತ್ತವೆ.

ತನ್ಮಧ್ಯೆ ಆ್ಯಂಡ್ರಾಯ್ಡಾಗಾಗಿ ಸ್ಟಿಕರ್ಸ್ ಫೀಚರ್ ಕೂಡ ಅಭಿವೃದ್ಧಿಗೊಳ್ಳುತ್ತಿದ್ದು, ಶೀಘ್ರವೇ ಲಭ್ಯವಾಗಲಿದೆ ಎಂದು ವೆಬ್‌ಸೈಟ್ ವರದಿ ಮಾಡಿದೆ. ವಾಟ್ಸಾಪ್ ಇತರ ಚಾಟ್‌ಗಳಿಗೆ ಸ್ಟಿಕರ್ಸ್ ಫಾರ್‌ವರ್ಡ್ ಮಾಡಲು ಬೆಂಬಲವನ್ನು ಒದಗಿಸಿತ್ತಾದರೂ, ಈ ಫೀಚರ್‌ನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ವಾಟ್ಸಾಪ್ ಈಗ ಫೀಚರ್‌ನ ವರ್ತನೆ ಯನ್ನು ಪರಿಷ್ಕರಿಸಿದ್ದು, ಭವಿಷ್ಯದಲ್ಲಿ ಈ ಫೀಚರ್ ಕ್ರಿಯಾಶೀಲಗೊಂಡಾಗ ಮೆಸೇಜ್‌ನ್ನು ಬೇರೊಂದು ಚಾಟ್‌ನ ಮೂಲಕ ಫಾರ್‌ವರ್ಡ್ ಮಾಡಿದ್ದರೆ ಅದನ್ನು ಬಬಲ್ ರೂಪದಲ್ಲಿ ತೋರಿಸಲಿದೆ ಎಂದು ವರದಿಯು ತಿಳಿಸಿದೆ.

ವಾಟ್ಸಾಪ್ ತನ್ನ ಆ್ಯಪ್‌ನ ಆ್ಯಂಡ್ರಾಯ್ಡಾ ಬೀಟಾ ಮತ್ತು ವಿಂಡೋಸ್ ಆವೃತ್ತಿಯಲ್ಲಿ ಹೊಸ 'ಗ್ರೂಪ್ ಡಿಸ್ಕ್ರಿಪ್ಶನ್' ಫೀಚರ್‌ನ್ನೂ ಪರೀಕ್ಷೆಗೊಳಪಡಿಸಿದೆ. ಇದು ಬಳಕೆದಾರರು ಗ್ರುಪ್ ನೇಮ್ ಮೇಲೆ ಟ್ಯಾಪ್ ಮಾಡುವ ಮೂಲಕ ಗ್ರುಪ್ ಡಿಸ್ಕ್ರಿಪ್ಶನ್ ಅನ್ನು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಡಿಸ್ಕ್ರಿಪ್ಶನ್‌ನ್ನು ಸೇರಿಸುವ ಆಯ್ಕೆಯು ಗ್ರುಪ್ ಚಿತ್ರದ ಕೆಳಗೆ ಕಾಣಿಸಿಕೊಳ್ಳಲಿದೆ. ನಾನ್-ಗ್ರೂಪ್ ಅಡ್ಮಿನ್‌ಗಳೂ ಗ್ರುಪ್ ಡಿಸ್ಕ್ರಿಪ್ಶನ್‌ನ್ನು ಸೇರಿಸಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News