ಗೌತಮ್ ಅದಾನಿ ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಸಾಲಗಾರ: ಸುಬ್ರಮಣಿಯನ್ ಸ್ವಾಮಿ

Update: 2018-03-06 13:42 GMT

ಹೊಸದಿಲ್ಲಿ, ಮಾ.6: ಕೈಗಾರಿಕೋದ್ಯಮಿ ಗೌತಮ್ ಅದಾನಿ ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಸಾಲಗಾರನಾಗಿದ್ದಾರೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಗೌತಮ್ ಅದಾನಿಯನ್ನು ಜವಾಬ್ದಾರರನ್ನಾಗಿಸಬೇಕು ಇಲ್ಲದಿದ್ದರೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವುದು ಅನಿವಾರ್ಯವಾದೀತು ಎಂದು ಸ್ವಾಮಿ ಎಚ್ಚರಿಸಿದ್ದಾರೆ.

ಗೌತಮ್ ಅದಾನಿ ಪ್ರಧಾನಿ ನರೇಂದ್ರ ಮೋದಿಯ ಆಪ್ತರಾಗಿದ್ದಾರೆ. ಗೌತಮ್ ಅದಾನಿ ಹಗ್ಗದ ಮೇಲೆ ನಡೆಯುವ ನಟ ಎಂದು ನಾನು ಹೇಳುತ್ತೇನೆ. ಯಾಕೆಂದರೆ ಅವರ ಹೆಸರಲ್ಲಿ 72,000 ಕೋಟಿ ರೂ. ಪಾವತಿಯಾಗದ ಸಾಲವಿರುವುದಾಗಿ ನನಗೆ ತಿಳಿದುಬಂದಿದೆ. ಹಾಗಾಗಿ ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಸ್ವಾಮಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಬ್ಲೂಂಬರ್ಗ್ ವರದಿಯ ಪ್ರಕಾರ ಸೆಪ್ಟೆಂಬರ್ 2017ರ ವೇಳೆಗೆ ಅದಾನಿ ಪವರ್ ಹೆಸರಲ್ಲಿ 47,609.43 ಕೋಟಿ ರೂ. , ಅದಾನಿ ಟ್ರಾನ್ಸ್‌ಮಿಶನ್ ಹೆಸರಲ್ಲಿ 8,356.07 ಕೋಟಿ ರೂ., ಅದಾನಿ ಎಂಟರ್ಟೈನ್ಮೆಂಟ್ ಹೆಸರಲ್ಲಿ 22,424.44 ಕೋಟಿ ರೂ., ಮತ್ತು ಅದಾನಿ ಪೋರ್ಟ್ಸ್ ಹೆಸರಲ್ಲಿ 20,791.15 ಕೋಟಿ ರೂ. ಸಾಲ ಬಾಕಿಯಿದೆ. ಫೋರ್ಬ್ಸ್ ಪ್ರಕಾರ, ಅದಾನಿ ಮತ್ತವರ ಕುಟುಂಬದ ಒಟ್ಟು ಆಸ್ತಿಯ ವೌಲ್ಯ 2017ರಲ್ಲಿ 11 ಬಿಲಿಯನ್ ಡಾಲರ್ ಆಗಿದ್ದು ಅವರು ದೇಶದ 10ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News