ಸಿರಿಯಾದಲ್ಲಿ ರಶ್ಯಾ ವಿಮಾನ ಪತನ: 32 ಮಂದಿ ಮೃತ್ಯು

Update: 2018-03-06 14:48 GMT

ಮಾಸ್ಕೋ, ಮಾ.6: ರಶ್ಯಾದ ವಿಮಾನವೊಂದು ಸಿರಿಯಾದಲ್ಲಿ ಪತಗೊಂಡಿದ್ದು, ವಿಮಾನದಲ್ಲಿದ್ದ 32 ಮಂದಿ ಮೃತಪಟ್ಟಿದ್ದಾರೆ ಎಂದು ರಶ್ಯಾ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ರಶ್ಯಾ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ವಿಮಾನದಲ್ಲಿ 26 ಮಂದಿ ಪ್ರಯಾಣಿಕರು ಹಾಗು 6 ಮಂದಿ ಸಿಬ್ಬಂದಿಯಿದ್ದರು ಎನ್ನಲಾಗಿದೆ. “ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ವಿಮಾನವು ಬೆಂಕಿಗೀಡಾಗಿರಲಿಲ್ಲ” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ರನ್ ವೇಯಿಂದ 500 ಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದೆ.  ಈ ಘಟನೆಗೆ ಸಂಬಂಧಿಸಿದ ತನಿಖೆಯನ್ನು ವಿಶೇಷ ಸಮಿತಿಯೊಂದು ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News