23ನೇ ಶತಕ ಸಿಡಿಸಿದ ಗೇಲ್: ವೆಸ್ಟ್ ಇಂಡೀಸ್‌ಗೆ ಜಯ

Update: 2018-03-06 18:25 GMT

ಹರಾರೆ,ಮಾ.6: ಯುಎಇ ವಿರುದ್ಧ ಮಂಗಳವಾರ ನಡೆದ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 23ನೇ ಏಕದಿನ ಶತಕ ಸಿಡಿಸಿದರು.

 ಗೇಲ್ ಅವರ 78 ಎಸೆತಗಳ ಇನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳಿದ್ದವು. ಯುಎಇ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಗೇಲ್ ಪಂದ್ಯದ 24ನೇ ಓವರ್‌ನಲ್ಲಿ ಶತಕ ಪೂರೈಸಿದರು. ಗೇಲ್ ವಿಂಡೀಸ್‌ನ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ದಾಂಡಿಗ ನಾಗಿದ್ದಾರೆ. 91 ಎಸೆತಗಳಲ್ಲಿ 123 ರನ್(7 ಬೌಂಡರಿ, 11 ಸಿಕ್ಸರ್)ಗಳಿಸಿದ ಗೇಲ್ ಆರ್ಭಟಕ್ಕೆ ಇಮ್ರಾನ್ ಹೈದರ್ ತೆರೆ ಎಳೆದರು.

 ಗೇಲ್ ಹಾಗೂ ಹೆಟ್ಮೆರ್(127) ಶತಕದ ನೆರವಿನಿಂದ ವಿಂಡೀಸ್ 4 ವಿಕೆಟ್‌ಗೆ 357 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಯುಎಇ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿ 60 ರನ್‌ನಿಂದ ಸೋಲುಂಡಿತು. ರಮೀಝ್ ಶಹಝಾದ್(ಔಟಾಗದೆ 112) ವೀರೋಚಿತ ಶತಕ ಸಿಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News