ಅಳೇಕಲ: ಇಂದು ಮಸೀದಿ ಉದ್ಘಾಟನೆ ಮತ್ತು ಸಮಾವೇಶ

Update: 2018-03-08 10:08 GMT

ಮಂಗಳೂರು, ಮಾ.8: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ (ಎಸ್.ಕೆ.ಎಸ್.ಎಂ.) ಇದರ ಅಧೀನದ ಅಳೇಕಲ 'ಮಸ್ಜಿದ್ ಅಲ್-ಫುರ್ಖಾನ್'ನ ನವೀಕೃತ ಕಟ್ಟಡ ಉದ್ಘಾಟನೆಯು ಇಂದು(ಮಾ.8) ಅಸರ್ ನಮಾಝಿನ ಬಳಿಕ ನಡೆಯಲಿದೆ.

ನದ್ವತುಲ್ ಮುಜಾಹಿದೀನ್ ಕೇರಳ ಇದರ ರಾಜ್ಯಾಧ್ಯಕ್ಷ ಟಿ.ಪಿ.ಅಬ್ದುಲ್ಲಾ ಕೋಯ ಮದನಿ ಉದ್ಘಾಟಿಸಲಿರುವರು. ಇದರ ಅಂಗವಾಗಿ ಇಂದು ಸಂಜೆ 5 ರಿಂದ 9:30ರ ತನಕ 'ಮಾನವೀಯ ಮೌಲ್ಯಗಳು' ಎಂಬ ವಿಷಯದಲ್ಲಿ ವಿಚಾರಗೋಷ್ಠಿ ಹಾಗೂ ಧಾರ್ಮಿಕ ಪ್ರವಚನ ನಡೆಯಲಿದೆ. ಕಾರ್ಯಕ್ರಮದಲ್ಲಿ ಡಾ.ಹುಸೈನ್ ಮಡವೂರು, ಇಸಾಕ್ ಕಲಿಕಂಡಿ, ಮುಸ್ತಫಾ ದಾರಿಮಿ, ಮೌಲಾನ ಯಹ್ಯಾ ತಂಙಳ್ ಮೊದಲಾದವರು ಭಾಗವಹಿಸುವರು.

ಮಾ.9ರಂದು ಅಪರಾಹ್ನ 2:30ರಿಂದ 4:30ರವರೆಗೆ ಮಹಿಳಾ ಸಮಾವೇಶ ಜರುಗಲಿರುವುದು. ಇದರಲ್ಲಿ 'ನೇರಮಾರ್ಗ ಹಾಗೂ ಇಂದಿನ ಮಹಿಳೆಯರು ಮತ್ತು ಸಾಮಾಜಿಕ ಜಾಲತಾಣ ಎಂಬ ವಿಷಯದಲ್ಲಿ ಕ್ರಮವಾಗಿ ಮುಮ್ತಾಝ್ ಹಾಗೂ ದಾರುಲ್ ಐಮನ್ ಕಾಲೇಜಿನ ಪ್ರಾಂಶುಪಾಲೆ ಮೆಹ್ತಾಬ್ ಭಾಷಣ ಮಾಡಲಿದ್ದಾರೆ.

ಸಂಜೆ 5ರಿಂದ ರಾತ್ರಿ 10ರವರೆಗೆ ಉನೈಸ್ ಪಾಪಿನಶ್ಶೇರಿ, ಮೌಲವಿ ಅಹ್ಮದ್ ಅನಸ್ ಪ್ರವಚನ ನೀಡಲಿದ್ದಾರೆಂದು ಎಸ್.ಕೆ.ಎಸ್.ಎಂ. ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News