ಜನರನ್ನು ವಿಭಜಿಸಿ ಚುನಾವಣೆ ಗೆಲ್ಲುವ ರಾಜಕೀಯ: ರಾಹುಲ್
Update: 2018-03-08 21:48 IST
ಸಿಂಗಾಪುರ, ಮಾ. 8: ಭಾರತದಲ್ಲಿ ‘ಬೆದರಿಕೆ’ಯ ಸಾಮಾನ್ಯ ವಾತಾವರಣವಿದೆ ಹಾಗೂ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಜನರನ್ನು ಒಡೆಯುವ ರಾಜಕಾರಣವನ್ನು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಸಿಂಗಾಪುರದ ಲೀ ಕಾನ್ ಯು ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯಲ್ಲಿ ಗುಂಪು ಚರ್ಚೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರನ್ನು ವಿಭಜಿಸಿ ಅವರ ಕೋಪವನ್ನು ಚುನಾವಣೆಯಲ್ಲಿ ಗೆಲ್ಲಲು ಉಪಯೋಗಿಸುವ ನಿರ್ದಿಷ್ಟ ರಾಜಕಾರಣವನ್ನು ಭಾರತದಲ್ಲಿ ಮಾಡಲಾಗುತ್ತಿದೆ ಎಂದರು.
ಈ ಮಾದರಿಯ ರಾಜಕಾರಣವು ಭಾರತಕ್ಕಷ್ಟೇ ಸೀಮಿತವಾಗಿಲ್ಲ, ಹಲವು ಪ್ರದೇಶಗಳಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.