ಪ್ರಧಾನ ಸುತ್ತಿಗೆ ಯೂಕಿ ತೇರ್ಗಡೆ
Update: 2018-03-08 23:53 IST
ಇಂಡಿಯನ್ ವೆಲ್ಸ್ (ಅಮೆರಿಕ), ಮಾ.8: ರಾಮ್‌ಕುಮಾರ್ ರಾಮನಾಥನ್‌ರನ್ನು ಮಣಿಸಿದ ಯೂಕಿ ಭಾಂಬ್ರಿ ಇಂಡಿಯನ್ ವೆಲ್ಸ್ ಎಟಿಪಿ ಮಾಸ್ಟರ್ಸ್ ಇವೆಂಟ್‌ನಲ್ಲಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
9ನೇ ಶ್ರೇಯಾಂಕದ ಭಾರತದ ಭಾಂಬ್ರಿ ತಮ್ಮದೇ ದೇಶದ ರಾಮ್‌ಕುಮಾರ್‌ರನ್ನು ಗುರುವಾರ ನಡೆದ ಎರಡನೇ ಹಾಗೂ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ 6-4, 6-2 ಸೆಟ್‌ಗಳಿಂದ ಸೋಲಿಸಿದ್ದಾರೆ.
ಇದೀಗ ಯೂಕಿ 22ರ ಹರೆಯದ ರಾಮ್‌ಕುಮಾರ್ ವಿರುದ್ಧ 3-1 ಹೆಡ್-ಟು-ಹೆಡ್ ದಾಖಲೆ ಕಾಯ್ದುಕೊಂಡಿದ್ದಾರೆ. ಯೂಕಿ 9 ವರ್ಷಗಳ ಬಳಿಕ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ. 2009ರಲ್ಲಿ ಕೊನೆಯ ಬಾರಿ ತೇರ್ಗಡೆಯಾಗಿದ್ದರು.
ಯೂಕಿ ಪ್ರಧಾನ ಸುತ್ತಿನ ಮೊದಲಪಂದ್ಯದಲ್ಲಿ 101ನೇ ರ್ಯಾಂಕಿನ ನಿಕೊಲಸ್ ಮಹುಟ್‌ರನ್ನು ಎದುರಿಸಲಿದ್ದಾರೆ. ಒಂದು ವೇಳೆ ಯೂಕಿ ಮೊದಲ ತಡೆಯನ್ನು ದಾಟಿದರೆ ವಿಶ್ವದ ನಂ.12ನೇ ಆಟಗಾರ, ಫ್ರಾನ್ಸ್‌ನ ಲುಕಾಸ್ ಪೌಲಿ ಅವರನ್ನು ಎದುರಿಸಲಿದ್ದಾರೆ.