×
Ad

ಉತ್ತರ ಪ್ರದೇಶ: ಮೋದಿ ಪ್ರತಿಮೆಗೆ ಹಾನಿ

Update: 2018-03-09 20:24 IST

ಲಕ್ನೋ, ಮಾ.9: ಇಲ್ಲಿನ ಕೌಶಾಂಬಿ ಜಿಲ್ಲೆಯಲ್ಲಿನ ಶಿವ ದೇವಾಲಯದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಗೆ ಹಾನಿಯಾಗಿದ್ದು, ಈ ಬಗ್ಗೆ ದೂರು ನೀಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪ್ರತಿಮೆಯ ಮೂಗು ಮುರಿದಿದೆ. ಆದರೆ ಹಾನಿಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. 2014ರ ಚುನಾವಣೆಗೆ ಮುನ್ನ ಬಿಜೆಪಿ ನಾಯಕ ಬ್ರಜೇಂದ್ರ ನಾರಾಯಣ್ ಮಿಶ್ರಾ ನೇತೃತ್ವದಲ್ಲಿ ಗ್ರಾಮಸ್ಥರು ಈ ಪ್ರತಿಮೆಯನ್ನು ಸ್ಥಾಪಿಸಿದ್ದರು. ಪ್ರತಿಮೆ ಹಾನಿಯಾಗಿರುವ ಬಗ್ಗೆ ದೂರು ನೀಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಮೋದಿ ಪ್ರಧಾನಿಯಾಗಲು ಪ್ರತಿದಿನ ಗ್ರಾಮಸ್ಥರು ಈ ದೇವಾಲಯದಲ್ಲಿ ಪ್ರಾರ್ಥಿಸುತ್ತಿದ್ದರು ಎಂದು ಬ್ರಜೇಂದ್ರರ ಪುತ್ರ ಅಲೋಕ್ ಮಿಶ್ರಾ ಹೇಳಿದ್ದಾರೆ. ಆ ನಂತರ ಪ್ರಾರ್ಥನೆ ನಿಂತಿದ್ದರೂ ಕೆಲವರು ದೇವಸ್ಥಾನಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News