×
Ad

ಭೀಮಾ-ಕೊರೆಗಾಂವ್ ಗಲಭೆ ‘ರಾಜ್ಯ ಪ್ರಾಯೋಜಿತ ಭಯೋತ್ಪಾದನೆ’: ಪ್ರತಿಪಕ್ಷ

Update: 2018-03-09 21:07 IST

ಮುಂಬೈ, ಮಾ. 9: ಭೀಮಾ-ಕೊರೆಗಾಂವ್ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿ ಗುರುವಾರ ಬಿಜೆಪಿ-ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಹಾಗೂ ಎನ್‌ಸಿಪಿ ನೇತೃತ್ವದ ಪ್ರತಿಪಕ್ಷ, ಇದು ‘‘ರಾಜ್ಯ ಪ್ರಾಯೋಜಿತ ಭಯೋತ್ಪಾದನೆ’’ ಎಂದು ಹೇಳಿದೆ.

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಲೆನಿನ್ ಅವರ ಪ್ರತಿಮೆಯನ್ನು ಕೆಡವಿದ ಬಗ್ಗೆ ಕೂಡ ಪ್ರತಿಪಕ್ಷ ಧ್ವನಿ ಎತ್ತಿತು.

ವಿಧಾನ ಸಭೆಯಲ್ಲಿ ಭೀಮಾ-ಕೊರೆಗಾಂವ್ ಗಲಭೆ ಬಗ್ಗೆ ಅಲ್ಪಾವಧಿ ಚರ್ಚೆ ನಡೆಸಿದ ಶರದ್ ರಾಂಪಿಸೆ (ಕಾಂಗ್ರೆಸ್), ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಸಮಿತಿಗೆ ಮುಖ್ಯ ಕಾರ್ಯದರ್ಶಿ ಅವರನ್ನು ಯಾಕೆ ನೇಮಕ ಮಾಡಿಲ್ಲ ಎಂದು ಪ್ರಶ್ನಿಸಿದರು.

ಪುಣೆ ಜಿಲ್ಲೆಯ ಭೀಮಾ-ಕೊರೆಗಾಂವ್ ಗ್ರಾಮದಲ್ಲಿ ಜನವರಿಯಲ್ಲಿ ನಡೆದ ಘರ್ಷಣೆ ಬಗೆಗಿನ ತನಿಖೆ ಮೇಲೆ ಪ್ರಭಾವ ಬೀರಲು ಅವರು ಈ ರೀತಿ ಮಾಡಿದ್ದಾರೆ. ಫಡ್ನವಿಸ್ ಸರಕಾರ ಸಮುದಾಯಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News