ಪಾಕ್ ತಾಲಿಬಾನ್ ನಾಯಕನ ಬಂಧನಕ್ಕೆ ನೆರವಾದರೆ 32 ಕೋಟಿ ರೂ. ಬಹುಮಾನ: ಅಮೆರಿಕ
Update: 2018-03-09 22:28 IST
ವಾಶಿಂಗ್ಟನ್, ಮಾ. 9: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ ನಾಯಕ, ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಮೌಲಾನಾ ಫಝ್ಲುಲ್ಲಾನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ 5 ಮಿಲಿಯ ಡಾಲರ್ (ಸುಮಾರು 32.60 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ.
ಟಿಟಿಪಿ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದಲ್ಲಿ ನಿಯಮಿತವಾಗಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ.
ಇತರ ಇಬ್ಬರು ಭಯೋತ್ಪಾದಕರ ಬಂಧನಕ್ಕೂ ಅಮೆರಿಕ ಬಹುಮಾನ ಘೋಷಿಸಿದೆ.
ಪಾಕಿಸ್ತಾನದ ವಿದೇಶ ಕಾರ್ಯದರ್ಶಿ ತೆಹ್ಮೀನಾ ಜಂಜುವ ಟ್ರಂಪ್ ಆಡಳಿತದ ಅಧಿಕಾರಿಗಳೊಂದಿಗೆ ಮಾತುಕತೆಗಳನ್ನು ನಡೆಸಿದ ಬಳಿಕ ಈ ಘೋಷಣೆ ಹೊರಬಿದ್ದಿದೆ.