×
Ad

ಭಾರತದ ಸೃಷ್ಟಿ ಬಕ್ಷಿಗೆ 26ನೆ ‘ಕಾಮನ್‌ವೆಲ್ತ್ ಪಾಯಿಂಟ್ ಆಫ್ ಲೈಟ್’

Update: 2018-03-09 22:33 IST

ಲಂಡನ್, ಮಾ. 9: ಬ್ರಿಟನ್ ರಾಣಿ ದ್ವಿತೀಯ ಎಲಿಝಬೆತ್ ಗುರುವಾರ ಭಾರತದ ಸೃಷ್ಟಿ ಬಕ್ಷಿಯನ್ನು 26ನೆ ‘ಕಾಮನ್‌ವೆಲ್ತ್ ಪಾಯಿಂಟ್ ಆಫ್ ಲೈಟ್’ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಭಾರತದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಅವರು ನೀಡಿರುವ ಶ್ರೇಷ್ಠ ಕೊಡುಗೆಗಳನ್ನು ಪರಿಗಣಿಸಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

 ಸೃಷ್ಟಿ ‘ಕ್ರಾಸ್‌ಬೋ ಮೈಲ್ಸ್’ ಚಳವಳಿಯ ಸ್ಥಾಪಕಿ. 2015ರಲ್ಲಿ ಭಾರತದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಮಹಿಳೆಯರ ವಿರುದ್ಧ ಹಿಂಸಾಚಾರದ 3,27,394 ಪ್ರಕರಣಗಳನ್ನು ದಾಖಲಿಸಿದ ಬಳಿಕ ಸೃಷ್ಟಿ ರಂಗಕ್ಕಿಳಿದರು.

ದೇಶಾದ್ಯಂತ ಲಿಂಗ ಸಮಾನತೆಯ ಸಂದೇಶವನ್ನು ಹರಡುವ ಚಳವಳಿಯನ್ನು ಆರಂಭಿಸಿದರು.

ಅವರ ನೇತೃತ್ವದಲ್ಲಿ ದೇಶಾದ್ಯಂತ 260 ದಿನಗಳ ಕಾಲ ನೂರಾರು ಮಹಿಳಾ ಕಾರ್ಯಕರ್ತರು 3,800 ಕಿ.ಮೀ. ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News