ಬಿಐಟಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Update: 2018-03-10 06:12 GMT

ಮಂಗಳೂರು, ಮಾ.10: ಇನೋಳಿಯಲ್ಲಿರುವ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ.8ರಂದು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಬೀನಾ ಆ್ಯಂಟೋನಿ, ಸಮಾಜದಲ್ಲಿ ಜನರ ಯಶಸ್ವಿ ಜೀವನದ ಹಿಂದೆ ಮಹಿಳೆಯರ ಪಾತ್ರ ಹಿರಿದು. ಮಹಿಳೆಯರನ್ನು ಪ್ರೀತಿಸಿ, ಗೌರವಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಕಂಕಣಬದ್ಧರಾಗಬೇಕು ಎಂದು ಅವರು ಕರೆ ನೀಡಿದರು.

ಇನ್ನೋರ್ವೆ ಮುಖ್ಯ ಅತಿಥಿ ಪ್ರೊ.ಹಿಲ್ಡಾ ಪಿಂಟೊ ಮಾತನಾಡಿ ಶುಭ ಹಾರೈಸಿದರು.

ಬಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಆ್ಯಂಟೋನಿ, ಬೀಡ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಮೆಂಡೋನ್ಸಾ ಉಪಸ್ಥಿತರಿದ್ದರು.

ಪ್ರೊ.ವಿನುತಾ ಮತ್ತು ಪ್ರೊ.ಮುಬೀನಾ ಕಾರ್ಯಕ್ರಮವನ್ನು ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News