ಸಿಆರ್‌ಪಿಎಫ್ ಯೋಧ ಆತ್ಮಹತ್ಯೆ: 3 ದಿನಗಳಲ್ಲಿ 3ನೆ ಪ್ರಕರಣ
Update: 2018-03-10 19:47 IST
ಶ್ರೀನಗರ, ಮಾ. 10: ಸಿಆರ್‌ಪಿಎಫ್ ಯೋಧನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಯೋಧರ ಸಂಖ್ಯೆ ಮೂರಕ್ಕೇರಿದೆ. ಸಿಆರ್‌ಪಿಎಫ್ 79 ಬೆಟಾಲಿಯನ್‌ನ ಕಾನ್ಸ್‌ಟೆಬಲ್ ಸುಖ್‌ದೇವ್ ಸೋನ್ವಾರ್ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯೋಧ ತನ್ನ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸೇವೆಗೆ ನಿಯೋಜಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮೂರನೇ ಯೋಧ ಇವರು. ಕುಪ್ವಾರ ಜಿಲ್ಲೆಯಲ್ಲಿ ಭಯೋತ್ಪಾದನೆ ನಿಗ್ರಹ ರಾಷ್ಟ್ರೀಯ ರೈಫಲ್ಸ್‌ನ ಇಬ್ಬರು ಯೋಧರು ಕ್ರಮವಾಗಿ ಗುರುವಾರ ಹಾಗೂ ಶುಕ್ರವಾರ ತಮ್ಮ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.