ಗೆಳೆಯರು ಅಡವು ಇಟ್ಟ ಚಿನ್ನದ ಸರ ಮರಳಿ ಸಿಗಲಿಲ್ಲ: ವಿದ್ಯಾರ್ಥಿನಿ ಆತ್ಮಹತ್ಯೆ
ಹೈದರಾಬಾದ್, ಮಾ. 11: ವ್ಯಾಪಾರ ಮಾಡಲು ಹಣಕ್ಕಾಗಿ ಗಿರವಿ ಇಡಲು ಗೆಳೆಯರಿಗೆ ಕೊಟ್ಟಿದ್ದ ತನ್ನ ಚಿನ್ನದ ಸರ ಮರಳಿ ತನಗೆ ಸಿಗದಿರುವುದರಿಂದ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶನಿವಾರ ಸಂಜೆ 21ವರ್ಷದ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿಯ ಇಬ್ಬರು ಗೆಳೆಯರು ದೀಪಾವಳಿಗೆ ಪಟಾಕಿ ಮಾರಲು ನಿರ್ಧರಿಸಿದ್ದರು. ಇದಕ್ಕೆ ಹಣ ಹೊಂದಿಸಲಿಕ್ಕಾಗಿ ವಿದ್ಯಾರ್ಥಿನಿಯಿಂದ ಚಿನ್ನದ ಸರವನ್ನು ಪಡೆದು ಗಿರವಿಗಿಡಲಾಗಿತ್ತು. ಆದರೆ ಪಟಾಕಿ ಮಾರಾಟದಲ್ಲಿ ಲಾಭ ವಾಗದೆ, ಗಿರವಿ ಇಟ್ಟ ಸರವನ್ನು ಬಿಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ತನ್ನ ಚಿನ್ನದ ಸರ ಸಿಗದೆ ಬೇಸರಗೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚಿಕಲ್‍ಗುಡ ಸರ್ಕಲ್ ಇನ್ಸ್‍ಪೆಕ್ಟರ್ ಆರ್. ಭಾಸ್ಕರ್ ತಿಳಿಸಿದ್ದಾರೆ.
ಮೃತದೇಹವನ್ನು ಪೋಸ್ಟ್‍ಮಾರ್ಟಂ ಮಾಡಿ ಬಂಧುಗಳಿಗೆ ಬಿಟ್ಟುಕೊಡಲಾಗುವುದು. ಘಟನೆಯಲ್ಲಿ ವಿದ್ಯಾರ್ಥಿನಿಯ ಇಬ್ಬರು ಗೆಳೆಯರ ವಿರುದ್ಧ ಕೇಸು ದಾಖಲಾಗಿದೆ.