ಸೆಲ್ಫಿ ಕ್ಲಿಕ್ಕಿಸಿ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ ಕೈದಿಗಳು !
Update: 2018-03-11 21:29 IST
ಮುಝಫ್ಫರ್‌ನಗರ, ಮಾ. 11: ಮುಝಫ್ಫರ್‌ನಗರ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಮೂವರು ವಿಚಾರಣಾಧೀನ ಕೈದಿಗಳು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವುದಾಗಿ ಆರೋಪಿಸಲಾಗಿದೆ.
ಫೋಟೊ ತೆಗೆದು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಲು ಬಳಸಲಾದ ಸ್ಮಾರ್ಟ್‌ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮೂವರು ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಹೇಳಿದ್ದಾರೆ. ಈ ಮೂವರು ಕೈದಿಗಳು ಕೊಲೆ ಹಾಗೂ ಕೊಲೆ ಯತ್ನದ ಆರೋಪಿಗಳು ಎಂದು ಅವರು ತಿಳಿಸಿದ್ದಾರೆ.