ಅಖಿಲ್ ಶೇರೊನ್‌ಗೆ ಚಿನ್ನ
Update: 2018-03-11 23:53 IST
ಗ್ವಾದಲಾಜಾರಾ, ಮಾ.11: ಭಾರತದ ಯುವ ಶೂಟರ್ ಅಖಿಲ್ ಶೇರೊನ್ ಅವರು ಮೆಕ್ಸಿಕೊದಲ್ಲಿ ನಡೆಯುತ್ತಿರುವಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ 50 ಮೀಟರ್‌ರೈಫಲ್ 3 ಪೋಷಿಸನ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.
ಶೇರೊನ್ ಅವರು ಚೊಚ್ಚಲ ಪ್ರವೇಶದಲ್ಲೇ ಚಿನ್ನ ಪಡೆದ ಭಾರತದ ನಾಲ್ಕನೇ ಶೂಟರ್ ಎನಿಸಿಕೊಂಡಿದ್ದಾರೆ.
ಶಾಝರ್ ರಿಝ್ವಿ, ಮನು ಭಾಕರ್, ಮೆಹ್ಲು ಘೋಷ್ ಮತ್ತು ಅಂಜುಮ್ ವೌಡ್ಗಿಲ್ ಅವರ ನೆರವಿನಲ್ಲಿ ಭಾರತ ಶೂಟಿಂಗ್ ವಿಶ್ವಕಪ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಶೇರೊನ್ ಅವರು ಫೈನಲ್‌ನಲ್ಲಿ 455.6 ಪಾಯಿಂಟ್ಸ್ ದಾಖಲಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಮತ್ತು ಅಸ್ಟ್ರೀಯದ ಬೆರ್ನಾರ್ಡ್ ಪಿಕೆಲ್ 452 ಪಾಯಿಂಟ್ ಪಡೆದು ಎರಡನೇ ಸ್ಥಾನದೊಂದಿಗೆ ಬೆಳ್ಳಿ ಜಯಿಸಿದರು.