ರಾಜೀವ್ ಗಾಂಧಿ ಹತ್ಯೆ ಪ್ರಕರಣ ಪೇರರಿವಾಲನ್ ಮನವಿ ರದ್ದತಿಗೆ ಸಿಬಿಐ ಆಗ್ರಹ

Update: 2018-03-12 16:01 GMT

 ಮುಂಬೈ, ಮಾ. 12: ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣವನ್ನು ಮರು ಆರಂಭಿಸಲು ಸಾಧ್ಯವಿಲ್ಲ ಹಾಗೂ ತೀರ್ಪು ರದ್ದುಗೊಳಿಸುವಂತೆ ಕೋರಿ ಹತ್ಯೆ ಅಪರಾಧಿಗಳಲ್ಲಿ ಒಬ್ಬನಾದ ಎ.ಜಿ. ಪೇರರಿವಾಲನ್‌ನ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಬೇಕು ಎಂದು ಸಿಬಿಐ ಸೋಮವಾರ ಸುಪ್ರೀಂ ಕೋರ್ಟ್‌ಲ್ಲಿ ಹೇಳಿದೆ. ತೀರ್ಪು ಹಿಂದೆಗೆಯುವಂತೆ ಪೇರರಿವಾಲನ್ ಸಲ್ಲಿಸಿದ ಮನವಿಯ ಕಾನೂನು ನಿಲುವಿನ ಬಗ್ಗೆ ಸಿಬಿಐ ಪ್ರಶ್ನಿಸಿದೆ. ಬಾಂಬ್ ಸ್ಫೋಟಿಸುವ ಯೋಜನೆಯ ಮೂಲದ ಬಗೆಗಿನ ತನಿಖೆಗೆ ಶ್ರೀಲಂಕಾದಿಂದ ಯಾವುದೇ ನೆರವು ದೊರೆಯುತ್ತಿಲ್ಲ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಬಳಿಕ, 26 ವರ್ಷ ಜೈಲಿನಲ್ಲಿ ಕಳೆದಿರುವ ಪೇರರಿವಾಲನ್ ಪ್ರಕರಣದ ತನಿಖೆಯನ್ನು ಮರು ಆರಂಭಿಸುವಂತೆ ಮನವಿ ಮಾಡಿದ್ದ. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈಯಲು ಬೆಲ್ಟ್ ಬಾಂಬ್‌ಗಾಗಿ ಎರಡು 9 ವೋಲ್ಟ್‌ನ ಬ್ಯಾಟರಿ ಪೂರೈಸಿರುವ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಎ.ಜಿ. ಪೇರರಿವಾಲನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News