ಸುಲಿಗೆ ಪ್ರಕರಣ: ನಾಗಾಲ್ಯಾಂಡ್ ಮಾಜಿ ಮುಖ್ಯಮಂತ್ರಿ ಝೆಲಿಯಾಂಗ್‌ಗೆ ಸಮನ್ಸ್

Update: 2018-03-12 16:06 GMT

ಹೊಸದಿಲ್ಲಿ, ಮಾ. 12: ಸುಲಿಗೆ ಹಾಗೂ ಉಗ್ರ ಸಂಘಟನೆಯಾಗಿರುವ ನಿಷೇಧಿತ ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್‌ಗೆ ಆರ್ಥಿಕ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿ ಮಾರ್ಚ್ 13ರಂದು ದಿಲ್ಲಿಗೆ ಆಗಮಿಸಿ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಾಗಾಲ್ಯಾಂಡ್‌ನ ಮಾಜಿ ಮುಖ್ಯಮಂತ್ರಿ ಟಿ.ಆರ್. ಝೆಲಿಯಾಂಗ್‌ಗೆ ಸಮನ್ಸ್ ಜಾರಿ ಮಾಡಿದೆ. ಆದಾಗ್ಯೂ, ಇದು ರಾಜಕೀಯ ಸಂಚಿನ ನಡೆ ಎಂದು ವ್ಯಾಖ್ಯಾನಿಸಿರುವ ಝೆಲಿಯಾಂಗ್‌ನ ನಿಕಟವರ್ತಿ ಅಝಿಯು ನಾಮ್‌ಸಿನ್ ಹೌ, ಮಾರ್ಚ್ 13ರಂದು ನೂತನವಾಗಿ ರೂಪುಗೊಂಡ ವಿಧಾನ ಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಈ ಬಗ್ಗೆ ಝೆಲಿಯಾಂಗ್ ತನಿಖಾ ಸಂಸ್ಥೆಗೆ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಝೆಲಿಯಾಂಗ್ ಇದುವರೆಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಸಮನ್ಸ್ ಯಾಕೆ ನೀಡಲಾಗಿದೆ ಎಂಬುದರ ಬಗ್ಗೆ ವಿವರ ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ. ಸಮನ್ಸ್ ನೀಡಿದ ಸಮಯ ಸಂದೇಹಾಸ್ಪದ ಎಂದು ಹೌ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅವರ ಕಚೇರಿಗೆ ಎರಡು ಸಮನ್ಸ್ ಕಳುಹಿಸಲಾಗಿದೆ. ಒಂದು ಸೋಮವಾರ ತಡ ರಾತ್ರಿ 12:15ಕ್ಕೆ ಹಾಗೂ ಇನ್ನೊಂದು ಬೆಳಗ್ಗೆ 10:15ಕ್ಕೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News