×
Ad

ಯುಎಇಯಿಂದ ಟರ್ಕಿಗೆ ಹೋಗುತ್ತಿದ್ದ ವಿಮಾನ ಪತನ: ಎಲ್ಲ 11 ಮಂದಿ ಸಾವು

Update: 2018-03-12 22:14 IST

ಟೆಹರಾನ್ (ಇರಾನ್), ಮಾ. 12: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ ರವಿವಾರ ಮಹಿಳೆಯರ ಗುಂಪೊಂದನ್ನು ಟರ್ಕಿಯ ಇಸ್ತಾಂಬುಲ್‌ಗೆ ಸಾಗಿಸುತ್ತಿದ್ದ ಖಾಸಗಿ ವಿಮಾನವೊಂದು ಭಾರೀ ಮಳೆಯಿಂದಾಗಿ ಇರಾನ್‌ನ ಪರ್ವತ ಪ್ರದೇಶವೊಂದರಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವೇ ದಿನಗಳ ಮೊದಲು, ಈ ವಿಮಾನವು ಈ ಯುವ ಮಹಿಳೆಯರನ್ನು ದುಬೈಗೆ ಕರೆದೊಯ್ದಿತ್ತು.

  ವಿಮಾನವು ಶಾಹರ್-ಇ ಕೊರ್ಡ್‌ ಸಮೀಪ ಪರ್ವತಕ್ಕೆ ಢಿಕ್ಕಿ ಹೊಡೆಯಿತು ಹಾಗೂ ತಕ್ಷಣ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು ಎಂದು ದೇಶದ ತುರ್ತು ಪರಿಸ್ಥಿತಿ ನಿರ್ವಹಣೆ ಸಂಸ್ಥೆಯ ವಕ್ತಾರರನ್ನು ಉಲ್ಲೇಖಿಸಿ ಇರಾನ್‌ನ ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

ಶಾಹರ್-ಇ ಕೊರ್ಡ್‌ ಇರಾನ್ ರಾಜಧಾನಿ ಟೆಹರಾನ್‌ನಿಂದ ಸುಮಾರು 370 ಕಿ.ಮೀ. ದೂರದಲ್ಲಿದೆ.

ಝಾಗ್ರೊಸ್ ಪರ್ವತಶ್ರೇಣಿಯಲ್ಲಿ ವಿಮಾನ ಪತನಗೊಂಡಿರುವ ಸ್ಥಳವನ್ನು ಸ್ಥಳೀಯ ಗ್ರಾಮಸ್ಥರು ತಲುಪಿದ್ದಾರೆ ಎಂದು ವಕ್ತಾರರು ಹೇಳಿದರು. ಅಲ್ಲಿ ಅವರಿಗೆ ಸುಟ್ಟು ಕರಕಲಾದ ದೇಹಗಳು ಮಾತ್ರ ಕಂಡಿದ್ದು, ಬದುಕಿರುವವರು ಯಾರೂ ಪತ್ತೆಯಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News