ಕೆಡುಕು ಮುಕ್ತ ಪರಿಸರ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ : ಉಮರ್ ಸಖಾಫಿ ಕಲ್ಮಿಂಜೆ

Update: 2018-03-13 17:13 GMT

ಉಳ್ಳಾಲ,ಮಾ.13: ಕೆಡುಕು ಮುಕ್ತ ಪರಿಸರ ನಿರ್ಮಾಣದಲ್ಲಿ ನಾಗರಿಕ ಸಮಾಜದ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪಣ ಪೊಡುವುದು ವರ್ತಮಾನ ಸನ್ನಿವೇಶದ ಅನಿವಾರ್ಯತೆಗಳಲ್ಲೊಂದಾಗಿದೆ ಎಂದು ಶಾಂತಿಭಾಗ್ ದಾರುಸ್ಸಲಾಂ ಜುಮಾ ಮಸ್ಜಿದ್ ಖತೀಬ್ ಉಮರ್ ಸಖಾಫಿ ಕಲ್ಮಿಂಜೆ ಹೇಳಿದ್ದಾರೆ.

ಶಾಂತಿಭಾಗ್ ನೂರುಲ್ ಉಲೂಂ ಮದ್ರಸ ವಿದ್ಯಾರ್ಥಿಗಳ ವತಿಯಿಂದ ಒಂದು ತಿಂಗಳುಗಳ ಕಾಲ ನಡೆದ 'ಕೆಡುಕು ಮುಕ್ತ ಪರಿಸರ ಅಭಿಯಾನ'ದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದಿಕ್ಸೂಚಿ ಬಾಷಣ ಮಾಡಿದ ಶಾಂತಿಭಾಗ್ ನೂರುಲ್ ಉಲೂಂ ಮದ್ರಸ ಮುಖ್ಯೋಪಾಧ್ಯಾಯ ಕೆ.ಎ.ಅಬ್ದುಲ್ ಅಝೀಝ್ ಪುಣಚ ಮಾತನಾಡಿ, "ಮಾನವನ ಅತಿರೇಕದಿಂದಾಗಿ ಪರಿಸರದ ಮೇಲೆ ನಿರಂತರ ಹಾನಿಯಾಗುತ್ತಿದೆ.ಮಾದಕ ವಸ್ತುಗಳಂಥಾ ಕೆಡುಕುಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ. ಇವುಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು.

ಯೇನೆಪೋಯ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಜಿ.ಶ್ರೀಕುಮಾರ್ ಮೆನನ್, ಡಾ.ಸಂಜಾದ್ ಅರಕ್ಕಲ್, ಡಾ.ಗಣೇಶ್, ಡಾ.ಇಮ್ರಾನ್ ರ ತಂಡ ಕೆಡುಕುಗಳ ಬಗ್ಗೆ ಸಚಿತ್ರ ತರಗತಿ ಮಂಡಿಸಿದರು.ದಾರುಸ್ಸಲಾಂ ಜುಮಾ ಮಸ್ಜಿದ್ ಮತ್ತು ನೂರುಲ್ ಉಲೂಂ ಮದ್ರಸ ಅಧ್ಯಕ್ಷ ಹಾಜಿ ಮುಹಮ್ಮದ್ ಪರಪ್ಪು ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಮುಖ್ಯಮಂತ್ರಿ ಯವರಿಗೆ ಮದ್ರಸ ವಿದ್ಯಾರ್ಥಿಗಳ ಮನವಿ ಪತ್ರ ವಾಚನ ಬಳಿಕ ಕೆ.ಎ.ಅಬ್ದುಲ್ ಅಝೀಝ್ ಪುಣಚ ,ಕೆಡುಕು ಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞೆ ಹೇಳಿಕೊಟ್ಟರು. 

ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಉದ್ಯಮಿ ಹಾಜಿ ಎ.ಹೆಚ್.ಮಹಮೂದ್, ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ, ರೆಂಜಾಡಿ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಖ್ ದಾರಿಮಿ ಗ್ರಾಮಚಾವಡಿ, ಅಕ್ಷರ ಇ ಮ್ಯಾಗಝಿನ್ ಸಂಪಾದಕ ಬಿ.ಎಸ್.ಇಸ್ಮಾಯಿಲ್ ಕುತ್ತಾರ್ ಮಾತನಾಡಿದರು.

ಹಾಜಿ ಅಬ್ದುಲ್‌ ಖಾದರ್, ಬಿ.ಎಂ.ಅಬ್ಬಾಸ್ ಮುಸ್ಲಿಯಾರ್, ಇಸ್ಮಾಯಿಲ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News