ಬಿಐಟಿಗೆ ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಭೇಟಿ

Update: 2018-03-14 06:50 GMT

ಮಂಗಳೂರು, ಮಾ.14: ಇನೋಳಿಯಲ್ಲಿ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಗೆ ಅಮೆರಿಕದ ವೆಸ್ಟ್ ವರ್ಜೀನಿಯ ಯುನಿರ್ವಸಿಟಿಯ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ಎವರ್ ಜೆ. ಬಾರ್ಬೆರೊ ಮಂಗಳವಾರ ಭೇಟಿ ನೀಡಿದರು.

ಈ ಸಂದರ್ಭ ಅವರು ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿಜ್ಞಾನದ ವಿವಿಧ ವಲಯಗಳಾದ ಏವಿಯೇಶನ್ ಅಟೋಮೊಬೈಲ್, ಕನ್‌ಸ್ಟ್ರಕ್ಷನ್ ಟಕ್ನಾಲಜಿ ಸ್ಥರಗಳಲ್ಲಿ ಸಮ್ಮಿಶ್ರ ವಸ್ತುಗಳ ಉಪಯೋಗಗಳ ಬಗ್ಗೆ ಅವರು ಮಾಹಿತಿ ನೀಡಿದರು. ಸಂಶೋಧನೆ ಮುಂದಾಗುವಂತೆ ವಿದ್ಯಾರ್ಥಿಗಳನ್ನು ಪ್ರೇರೆಪಿಸಿದ ಅವರು, ತಮ್ಮ ವಿಶ್ವವಿದ್ಯಾನಿಲಯಕ್ಕೆ ಸಂಶೋಧನೆ ನಡೆಸಲು ಆಹ್ವಾನಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಆ್ಯಂಟೋನಿ ಮತ್ತು ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News