ಮಲ್ಲೂರು ಬದ್ರಿಯಾ ನಗರದಲ್ಲಿ ರಕ್ತದಾನ ಶಿಬಿರ

Update: 2018-03-15 07:14 GMT

ಮಂಗಳೂರು, ಮಾ.15: ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಹಾಗೂ ಮಲ್ಲೂರು ಗ್ರಾಮದ ಹಲವು ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಇತ್ತೀಚೆಗೆ ಮಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು.

ಬದ್ರಿಯಾ ಜಮಾ ಮಸೀದಿಯ ಖತೀಬ್ ಮುಹಮ್ಮದ್ ಸಲೀಂ ಹನೀಫಿ ದುಆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಲ್ಲೂರು ಗ್ರಾಪಂ ಅಧ್ಯಕ್ಷ ಎಂ.ಯೂಸುಫ್ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಪಿಎಫ್‌ಐ ಮೂಡುಬಿದಿರೆ ಡಿವಿಷನ್ ಮಾಜಿ ಅಧ್ಯಕ್ಷ ಅಬೂಬಕರ್ ವಾಮಂಜೂರು ಮಾತನಾಡಿ ಬ್ಲಡ್ ಹೆಲ್ಪ್‌ಲೈನ್‌ನ ಕಾರ್ಯವನ್ನು ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೆಲ್ಪ್‌ಲೈನ್ ಅಡ್ಮಿನ್ ಸಿರಾಜುದ್ದೀನ್ ಪರ್ಲಡ್ಕ, 2016ರಲ್ಲಿ ದೇಶ ವಿದೇಶಗಳಲ್ಲಿ ನೆಲೆಸಿರುವ ಗೆಳೆಯರು ಆರಂಭಿಸಿದ ಈ ವಾಟ್ಸಾಪ್ ಗ್ರೂಪ್ ಬಳಿಕ ಒಂದು ಸಂಸ್ಥೆಯಾಗಿ ರಾಜ್ಯ ಸರಕಾರದಿಂದ ನೋಂದಾಯಿಸಲ್ಪಟ್ಟಿದೆ. ಇದುವರೆಗೆ 30 ಶಿಬಿರಗಳ ಮೂಲಕ 2,360 ಯೂನಿಟ್ ರಕ್ತ ಸಂಗ್ರಹಿಸಿ ರೋಗಿಗಳಿಗೆ ಪೊರೈಸಲಾಗಿದೆ ಎಂದರು.

ಎ.ಜೆ. ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಗೋಪಾಲಕೃಷ್ಣ ರಕ್ತದಾನದ ಮಹತ್ವ ಮತ್ತು ಕಾರ್ಯ ವೈಖರಿಯ ಬಗ್ಗೆ ವಿವರಿಸಿದರು.
ಇದೇ ಸಂದರ್ಭ ಸ್ವಯಂ ರಕ್ತದಾನ ಮಾಡುವುದರೊಂದಿಗೆ ತುರ್ತು ಸಂದರ್ಭಗಳಲ್ಲಿ ಆವಶ್ಯವಿರುವವರಿಗೆ ರಕ್ತ ಪೂರೈಕೆ ಮಾಡುವಲ್ಲಿ ಸಕ್ರಿಯವಾಗಿರುವ ಇಲ್ಲಿನ ಬದ್ರಿಯಾ ನಗರದ ಮಜೀದ್ ಹಾಗೂ ನಿಝಾಮುದ್ದೀನ್, 46 ಬಾರಿ ರಕ್ತದಾನ ಮಾಡಿರುವ ಯಾಕೂಬ್ ಎನ್.ಇ. ಮತ್ತು 21 ಬಾರಿ ರಕ್ತದಾನ ಮಾಡಿರುವ ಇಮ್ತಿಯಾಝ್ ಬಜ್ಪೆ ಅವರನ್ನು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ವತಿಯಿಂದ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಶಿಬಿರವನ್ನು ಆಯೋಜಿಸಿದ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ತಂಡವನ್ನು ಮಲ್ಲೂರು ಗ್ರಾಮದ ಸರ್ವ ಸಂಘಟನೆಗಳ ವತಿಯಿಂದ ಹಾಗೂ ರಕ್ತ ಸಂಗ್ರಹದಲ್ಲಿ ಸಹಕರಿಸಿದ ಎ.ಜೆ. ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿ ಗೋಪಾಲಕೃಷ್ಣ ಹಾಗೂ ತಂಡವನ್ನು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ವತಿಯಿಂದ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಆದಂ ಪಾದೆ, ಅಬೂಬಕರ್ ಕುದ್ರೋಳಿ, ಇಸ್ಮಾಯೀಲ್ ಎಂ.ಇ., ದಯಾನಂದ, ಯಾಕ್ಹೂಬ್ ಎನ್.ಇ., ಅಸ್ರಾರುದ್ದೀನ್, ಅಬ್ದುಲ್ಲಾ ಉಪಸ್ಥಿತರಿದ್ದರು.

ಸಮೀರ್ ಸೀಕೋ ಸ್ವಾಗತಿಸಿದರು. ಸಫ್ವಾನ್ ಕಲಾಯಿ ಕಾರ್ಯಕ್ರಮ ನಿರೂಪಿಸಿದರು. ಬ್ಲಡ್ ಹೆಲ್ಪ್ಲೈನ್ ಕರ್ನಾಟಕದ ಅಡ್ಮಿನ್‌ಗಳಾದ ಫೈಝಲ್ ಮಂಚಿ, ಇಮ್ರಾನ್ ಅಡ್ಡೂರು, ನಿಝಾಮ್ ತೋಕೂರು, ನಾಸಿರ್ ಬಿ.ಸಿ.ರೋಡ್, ಶಾಫಿ ಕಿನ್ಯ, ಅಲ್ಮಾಝ್, ಇಫ್ತಿಕಾರ್ ಕೃಷ್ಣಾಪುರ ಸಹಕರಿಸಿದರು.

ಬೆಳಗ್ಗೆ 9ರಿಂದ ಅಪರಾಹ್ನ 2:30ರವರೆಗೆ ನಡೆದ ಶಿಬಿರದಲ್ಲಿ 63 ಮಂದಿ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News