ಪ್ರತ್ಯೇಕ ಪ್ರಕರಣ: ವಿವಿಧೆಡೆ ಮರ ಬಿದ್ದು ಮನೆಗಳಿಗೆ ಹಾನಿ, ನಷ್ಟ

Update: 2018-03-15 13:40 GMT

ಬಂಟ್ವಾಳ, ಮಾ. 15: ನಿನ್ನೆ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಬಿ.ಮೂಡ ಗ್ರಾಮದ ನಂದರಬೆಟ್ಟು ನಿವಾಸಿ ಪ್ರೇಮಾ ಎಂಬವರ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಶಿವಾನಂದ, ಸಿಬ್ಬಂದಿ ಸದಾಶಿವ ಕೈಕಂಬ ಅವರು ಗುರುವಾರ ಬೆಳಿಗ್ಗೆ ಭೇಟಿ ನೀಡಿ, ಸ್ಥಳ ಮಹಜರು ಮಾಡಿದ್ದಾರೆ. ಘಟನೆಯಿಂದಾಗಿ 50 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಲಾಗಿದೆ.

ಕಲ್ಲಡ್ಕದ ಮೇಲಿನ ಪೇಟೆಯಲ್ಲಿರುವ ಅಬೂಬಕರ್ ಎಂಬವರ ಮನೆಯ ಮುಂಭಾಗದಲ್ಲಿ ತೆಂಗಿನ ಮರವೊಂದು ಉರುಳಿ ಬಿದ್ದಿದೆ. ಮನೆ ಹಾಗೂ ತಡೆಗೋಡೆಗೆ ಭಾಗಶಃ ಹಾನಿಯಾಗಿದೆ. ಘಟನೆಯಿಂದಾಗಿ 30 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಲಾಗಿದೆ.

ಅದೇ ರೀತಿ ನರಹರಿ ನಗರದಲ್ಲಿರುವ ವಿಶಾಲಾಕ್ಷಿ ಬಾಲಕೃಷ್ಣ ಪೂಜಾರಿ ಎಂಬವರ ಮನೆಗೆ ಮರವೊಂದು ಉರುಳಿ ಬಿದ್ದಿದ್ದು, ಭಾಗಶಃ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಯೋಗಾನಂದ, ಸಹಾಯಕ ಸಿಬ್ಬಂದಿ ಮೋಹನ್ ಭೇಟಿ ನೀಡಿ, ಸ್ಥಳ ಮಹಜರು ಮಾಡಿದ್ದಾರೆ.  ಘಟನೆಯಿಂದಾಗಿ 30 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಲಾಗಿದೆ. ಈ ಪ್ರತ್ಯೇಕ ಪ್ರಕರಣದಲ್ಲಿ ಯಾವುದೇ ಅಪಾಯದ ಬಗ್ಗೆ ಇದುವರೆಗೂ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News