×
Ad

ಶತಕದಂಚಿನಲ್ಲಿ ವಾಂಖಡೆ: ವಿದರ್ಭ 702/5

Update: 2018-03-16 23:46 IST

ನಾಗ್ಪುರ, ಮಾ.16: ಶೇಷ ಭಾರತ ವಿರುದ್ಧದ ಇರಾನಿ ಕಪ್‌ನ ಮೂರನೇ ದಿನದಾಟದಲ್ಲಿ ಮುಂಬೈನ ಹಿರಿಯ ಬ್ಯಾಟ್ಸ್‌ಮನ್ ವಸೀಂ ಜಾಫರ್ ಕೇವಲ 14 ರನ್‌ನಿಂದ ಮೂರನೇ ತ್ರಿಶತಕ ವಂಚಿತರಾದರು. ಆದಾಗ್ಯೂ ವಿದರ್ಭ ತಂಡ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 702 ರನ್ ಗಳಿಸಿದೆ.

 ವಿಸಿಎ ಸ್ಟೇಡಿಯಂನಲ್ಲಿ ಮೂರನೇ ದಿನವಾದ ಶುಕ್ರವಾರ ಕೇವಲ 28 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಯಿತು. ಮಂದ ಬೆಳಕಿನಿಂದಾಗಿ ದಿನದಾಟ ಕೊನೆಗೊಂಡಾಗ ಅಪೂರ್ವ ವಾಂಖಡೆ (ಔಟಾಗದೆ 99, 173ಎಸೆತ,12 ಬೌಂಡರಿ, 2 ಸಿಕ್ಸರ್)2ನೇ ಪ್ರಥಮ ದರ್ಜೆ ಶತಕ ಗಳಿಸಲು 1 ರನ್‌ನಿಂದ ಹಿಂದಿದ್ದಾರೆ. ಆಫ್ ಸ್ಪಿನ್ನರ್ ಆದಿತ್ಯ ಸರ್ವಾಟೆ(ಔಟಾಗದೆ 4) ಕ್ರೀಸ್ ಕಾಯ್ದುಕೊಂಡಿದ್ದಾರೆ.

 ಮಳೆಯಿಂದಾಗಿ ಎರಡು ಗಂಟೆ ವಿಳಂಬವಾಗಿ ಪಂದ್ಯ ಆರಂಭಗೊಂಡಿತ್ತು. ಜಾಫರ್(ಔಟಾಗದೆ 285) ಹಾಗೂ ಅಪೂರ್ವ ವಾಂಖಡೆ (ಔಟಾಗದೆ 44) ಬ್ಯಾಟಿಂಗ್ ಮುಂದುವರಿಸಿದರು. ಜಾಫರ್ ನಿನ್ನೆಯ ಮೊತ್ತಕ್ಕೆ ಒಂದು ರನ್ ಸೇರಿಸಿದ ಬೆನ್ನಿಗೇ ಸಿದ್ದಾರ್ಥ್ ಕೌಲ್‌ಗೆ ಕ್ಲೀನ್‌ಬೌಲ್ಡಾದರು.

ಎಡಗೈ ಸ್ಪಿನ್ನರ್ ನದೀಮ್‌ರಿಂದ ಜೀವದಾನ ಪಡೆದ ವಾಂಖಡೆ ನಿರ್ಭೀತಿಯಿಂದ ಬ್ಯಾಟ್ ಬೀಸಿದರು. ಮಂದಬೆಳಕಿನಿಂದಾಗಿ ಪಂದ್ಯ ಬೇಗನೆ ಕೊನೆಗೊಂಡಾಗ ವಾಂಖಡೆ 99 ರನ್ ಗಳಿಸಿದ್ದರು.

ಕೌಲ್ 91 ರನ್‌ಗೆ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಅಶ್ವಿನ್ ಹಾಗೂ ನದೀಮ್ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು, ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯಿದೆ.

ಸಂಕ್ಷಿಪ್ತ ಸ್ಕೋರ್

►ವಿದರ್ಭ ಮೊದಲ ಇನಿಂಗ್ಸ್: 208 ಓವರ್‌ಗಳಲ್ಲಿ 702/5 (ವಸೀಂ ಜಾಫರ್ 286, ಗಣೇಶ್ ಸತೀಶ್ 120,ವಾಂಖಡೆ ಅಜೇಯ 99, ಫಝಲ್ 89, ವಾಡ್ಕರ್ 37, ಸಿದ್ದಾರ್ಥ್ ಕೌಲ್ 2-91)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News